ಶ್ರೀಕೃಷ್ಣಮಠದಲ್ಲಿ ನಾಗರಪಂಚಮಿ ಆಚರಣೆ
ಉಡುಪಿ: ನಾಗಪಂಚಮಿಯ ಪ್ರಯುಕ್ತ ಶ್ರೀಕೃಷ್ಣಮಠದಲ್ಲಿ ಪರ್ಯಾಯ ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಶ್ರೀಸುಬ್ರಹ್ಮಣ್ಯ ಗುಡಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ದೊಡ್ಡಣ್ಣಗುಡ್ಡೆ: ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ನಾಗಾಲಯದಲ್ಲಿ ನಾಗರಪಂಚಮಿ ಆಚರಣೆ
ದೊಡ್ಡಣ್ಣಗುಡ್ಡೆ: ಶ್ರೀಚಕ್ರ ಪೀಠ ಸರಪೋಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ನಾಗಾಲಯದಲ್ಲಿ ಆ. 21ರ ಸೋಮವಾರ ನಾಗರಪಂಚಮಿ ಆಚರಣೆ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಅರ್ಚಕ ಅನಿಶ್ ಆಚಾರ್ಯರ ನೇತೃತ್ವದಲ್ಲಿ ನೆರವೇರಲಿರುವುದು. ಆ ಪ್ರಯುಕ್ತ ನಾಗರಾಜ ನಾಗರಾಣಿಯ ಸನ್ನಿಧಾನದಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಾಮೂಹಿಕ ವಿಶೇಷ ತನು ತಂಬಿಲ ಸೇವೆ, ಪಂಚಾಮೃತ ಅಭಿಷೇಕ, ಪ್ರಸನ್ನ ಪೂಜೆ, ಮಹಾಪ್ರಸಾದ ವಿತರಣೆ ನೆರವೇರಲಿರುವುದು ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ತಿಳಿಸಿದ್ದಾರೆ.
ಕಿದಿಯೂರು ನಾಗ ಸನ್ನಿಧಿಯಲ್ಲಿ ನಾಗರಪಂಚಮಿ ಆಚರಣೆ
ಉಡುಪಿ: ಕಿದಿಯೂರು ಹೋಟೆಲಿನ ಕಾರ್ಣಿಕ ಕೇತ್ರ ನಾಗ ಸನ್ನಿಧಿಯಲ್ಲಿ ನಾಗರಪಂಚಮಿ ಪೂಜೆಯನ್ನು ಮಾಡಲಾಯಿತು. ಕಬಿಯಾಡಿ ಜಯರಾಂ ಆಚಾರ್ಯ ಮಾರ್ಗದರ್ಶನದಲ್ಲಿ ಧಾರ್ಮಿಕ ಪೂಜಾ ವಿಧಾನಗಳಾದ ಕ್ಷೀರಾಭಿಷೇಕ ಹಾಗೂ ಗೆಂದಾಳಿ ಬೊಂಡಾಭಿಷೇಕ ನಡೆಸಲಾಯಿತು. ವಿಶೇಷ ಹೂವಿನ ಅಲಂಕಾರ, ಮಹಾ ಪೂಜೆ ನೆರವೇರಿಸಲಾಯಿತು. ಹೋಟೆಲ್ ಮಾಲೀಕ ಭುವನೇಂದ್ರ ಕಿದಿಯೂರು, ಶ್ರೀಮತಿ ಹೀರಾ ಬಿ ಕಿದಿಯೂರು, ಜಿತೇಶ್ ಕಿದಿಯೂರು, ಭವ್ಯಶ್ರೀ ಕಿದಿಯೂರು, ವಿಲಾಸ ಕುಮಾರ್, ಹಾಗೂ ಕ್ಷೇತ್ರದ ಭಕ್ತರು ಉಪಸ್ಥಿತರಿದ್ದರು.
ಶ್ರೀಕೃಷ್ಣಮಠದಲ್ಲಿ ನಾಗರಪಂಚಮಿ ವಿಶೇಷ ಪೂಜೆ
ಉಡುಪಿ: ಶ್ರೀಕೃಷ್ಣಮಠದಲ್ಲಿ ನಾಗರಪಂಚಮಿ ಪ್ರಯುಕ್ತ, ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರ ತೀರ್ಥ ಶ್ರೀಪಾದರು ಶ್ರೀವಾದಿರಾಜತೀರ್ಥರು ಪ್ರತಿಷ್ಠೆ ಮಾಡಿದ ತಕ್ಷಕ ಸನ್ನಿಧಾನದಲ್ಲಿ ಹಾಗೂ ಅಶ್ವತ್ಥಮರದ ನಾಗ ಸನ್ನಿಧಾನದಲ್ಲಿ ವಿಶೇಷ ಪೂಜೆ ನೆರವೇರಿಸಿದರು.
ಜನಮೇಜಯನ ಸರ್ಪ ಯಾಗವನ್ನು ನಿಲ್ಲಿಸಿ ನಾಗಗಳ ಪ್ರಾಣವನ್ನು ಉಳಿಸಿದವ ಆಸ್ತಿಕ
ಸರ್ಪವನ್ನು ಕಂಡಾಗ ಕೆಲ ಹಿರಿಯರು “ಆಸ್ತಿಕ… ಆಸ್ತಿಕ…” ವೆಂದು ಪಠಿಸುವರು. ಯಾರು ಈ ಆಸ್ತಿಕ..? ಅದ್ಯಾಕೆ “ಆಸ್ತಿಕ” ಎಂದು ಸಂಬೋಧಿಸುವರು..? ಸರ್ಪಗಳಿಗೂ ಅವನಿಗೂ ಏನು ಸಂಬಂಧವಿದೆ..? ಜನಮೇಜಯನು ಯಾಗ ನಡೆಸಿ ಸರ್ಪಸಂತತಿಯನ್ನೇ ನಾಶ ಮಾಡಲು ಹೊರಟಿದ್ದೇಕೆ….? ಈ ಎಲ್ಲಾ ವಿಚಾರಗಳನ್ನು ತಿಳಿಯಲು ಈ ಸಣ್ಣ ಕಥೆಯನ್ನು ಓದಬೇಕು. ಕೌಶಿಕಿ ನದಿಯ ಸುಂದರ ಪರಿಸರದಲ್ಲಿ ಋಷಿ ಶಮಿಕರ ಆಶ್ರಮವಿತ್ತು. ಅಲ್ಲಿ ಸಾಕಷ್ಟು ಋಷಿಕುಮಾರರು ವೇದಾಧ್ಯಯನದಲ್ಲಿ ನಿರತರಾಗಿದ್ದರು. ಅವರಲ್ಲಿ ಋಷಿ ಶಮಿಕರ ಪುತ್ರನಾದ ಶೃಂಗಿಯೂ ಒಬ್ಬನಾಗಿದ್ದನು. ಒಂದು ದಿನ […]