ಕರವಾಳಿಯಾದ್ಯಂತ ನಾಗರ ಪಂಚಮಿ ತಯಾರಿ; ಫಲಪುಷ್ಪಗಳಿಗೆ ಹೆಚ್ಚಿದ ಬೇಡಿಕೆ
ಉಡುಪಿ/ ಮಂಗಳೂರು: ದ.ಕ. ಹಾಗೂ ಉಡುಪಿ ಜಿಲ್ಲೆಯಾದ್ಯಂತ ಸೋಮವಾರ ನಾಗರಪಂಚಮಿ ಹಬ್ಬ ನಡೆಯಲಿದ್ದು, ಈ ಹಿನ್ನಲೆಯಲ್ಲಿ ಭಾನುವಾರವೇ ನಗರದಾದ್ಯಂತ ಸಂಭ್ರಮ ಮನೆಮಾಡಿತ್ತು. ನಾಗದೇವರಿಗೆ ಪ್ರಿಯವಾದ ಕೇದಿಗೆ, ಹಿಂಗಾರ, ಗೆಂದಾಳೆ ಸೀಯಾಳ, ಮಲ್ಲಿಗೆ ಹೂವುಗಳನ್ನು ಸಾರ್ವಜನಿಕರರು ಮುಗಿಬಿದ್ದು ಖರೀದಿಸುತ್ತಿದ್ದರು. ಉಡುಪಿ ರಥಬೀದಿ, ಮಂಗಳೂರಿನ ಪ್ರಮುಖ ಮಾರುಕಟ್ಟೆಗಳಲ್ಲಿ ಸೇರಿದಂತೆ ನಗರದ ವಿವಿಧೆಡೆ ಪೂಜಾ ಸಾಮಾಗ್ರಿಗಳ ಖರೀದಿ ಭರಾಟೆ ಜೋರಾಗಿದೆ. ನಾಗರಪಂಚಮಿ ಪ್ರಯುಕ್ತ ಉಡುಪಿಯ ಶ್ರೀಕೃಷ್ಣ ಮಠದ ಸುಬ್ರಹ್ಮಣ್ಯ ದೇವರು ಮತ್ತು ನಾಗಬನದಲ್ಲಿ ನಾಗದೇವರಿಗೆ ತನು ಪೂಜೆ ನೆರವೇರಿಸಲಾಗುತ್ತದೆ. ತಾಂಗೋಡು, ಮಾಂಗೋಡು, […]