ತ್ರಿಪುರಾ ನಾಗಾಲ್ಯಾಂಡ್ ನಲ್ಲಿ ಸರಕಾರ ರಚಿಸುವತ್ತ ಬಿಜೆಪಿ; ಮೇಘಾಲಯ ಸಮ್ಮಿಶ್ರ ಸರ್ಕಾರದತ್ತ ಚುನಾವಣಾ ಫಲಿತಾಂಶ
ನವದೆಹಲಿ: ಈಶಾನ್ಯ ರಾಜ್ಯಗಳ ಚುನಾವಣಾ ಫಲಿತಾಂಶಗಳ ಇತ್ತೀಚಿನ ಟ್ರೆಂಡ್‌ಗಳ ಪ್ರಕಾರ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ತ್ರಿಪುರಾ ಮತ್ತು ನಾಗಾಲ್ಯಾಂಡ್ ಎರಡರಲ್ಲೂ ಅಧಿಕಾರವನ್ನು ಉಳಿಸಿಕೊಳ್ಳಲು ಸಜ್ಜಾಗಿವೆ. ಏತನ್ಮಧ್ಯೆ, ಕಾನ್ರಾಡ್ ಸಂಗ್ಮಾ ನೇತೃತ್ವದ ಎನ್‌ಪಿಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಸ್ಪಷ್ಟ ಬಹುಮತದ ಕೊರತೆಯಿಂದಾಗಿ ಮೇಘಾಲಯವು ಸಮ್ಮಿಶ್ರ ಸರಕಾರ ರಚಿಸುವತ್ತ ಸಾಗುತ್ತಿದೆ. ಚುನಾವಣಾ ಟ್ರೆಂಡ್‌ಗಳು ಇದೇ ರೀತಿ ಮುಂದುವರಿದಲ್ಲಿ ಬಿಜೆಪಿಯು ಈಶಾನ್ಯ ಭಾರತದಲ್ಲಿ ತನ್ನ ಬಲವಾದ ಹಿಡಿತವನ್ನು ಉಳಿಸಿಕೊಳ್ಳುತ್ತದೆ ಮತ್ತು 8 ರಲ್ಲಿ 7 ರಾಜ್ಯಗಳಲ್ಲಿ ಸರ್ಕಾರವನ್ನು ಹೊಂದಲಿದೆ. […]
1 ಶತಕೋಟಿ ಹಣ್ಣಿನ ಮರಗಳನ್ನು ಬೆಳೆಸಿ ಜಾಗತಿಕ ತಾಪಮಾನ ಕಡಿಮೆಗೊಳಿಸಲು ನಾಗಾಲ್ಯಾಂಡ್ ಪಣ: ಫ್ರುಟ್ ಹಬ್ ಆಫ್ ಇಂಡಿಯಾ ಆಗುವತ್ತ ಈಶಾನ್ಯರಾಜ್ಯ
ಭಾರತದ ಈಶಾನ್ಯ ರಾಜ್ಯವಾದ ನಾಗಾಲ್ಯಾಂಡ್ ಸ್ಥಳೀಯವಾಗಿ ಬೆಳೆಯುವ ಹಣ್ಣುಗಳಿಗೆ ಹೆಸರುವಾಸಿಯಾಗಿದೆ. ಸ್ಥಳೀಯವಾಗಿ ಬೆಳೆಯುವ ವಿಲಕ್ಷಣ ಹಣ್ಣುಗಳು ಅತ್ಯಂತ ರುಚಿಯಾಗಿದ್ದು ಅಂತರರಾಷ್ಟ್ರೀಯ ಮಾರುಕಟ್ಟೆಯನ್ನು ಆಕರ್ಷಿಸುತ್ತವೆ ಮತ್ತು ರೈತರನ್ನು ಸಬಲೀಕರಣಗೊಳಿಸುತ್ತವೆ. 2019 ರಲ್ಲಿ ಪ್ರಾರಂಭವಾದ ‘ಟ್ರೀಸ್ ಫಾರ್ ವೆಲ್ತ್’ ನ ಮಹತ್ವಾಕಾಂಕ್ಷೆಯ ಮಿಷನ್ ಅಡಿಯಲ್ಲಿ, ನಾಗಾಲ್ಯಾಂಡ್‌ನ ಎನ್‌ಜಿಒ ‘ದ ಎಂಟಪ್ರ್ಯೂನರ್ಸ್ ಅಸೋಸಿಯೇಟ್ಸ್ ‘(ಟಿಇಎ) ರಾಜ್ಯವನ್ನು ‘ಫ್ರೂಟ್ ಹಬ್ ಆಫ್ ಇಂಡಿಯಾ’ ಆಗಿ ಪರಿವರ್ತಿಸಲು ಪಣ ತೊಟ್ಟಿದೆ. ಇದು 2025 ರ ವೇಳೆಗೆ 2 ಮಿಲಿಯನ್ ಹಣ್ಣಿನ ಮರಗಳನ್ನು ನೆಡುವ ಗುರಿಯನ್ನು […]