ಮಣಿಪಾಲ ಕೆಎಂಸಿ ಆಸ್ಪತ್ರೆಯ ರಕ್ತನಿಧಿ ಕೇಂದ್ರಕ್ಕೆ ಎನ್ಎಬಿಎಚ್ ಮಾನ್ಯತಾ ಪ್ರಮಾಣಪತ್ರ

ಮಣಿಪಾಲ: ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ ರಕ್ತನಿಧಿ ಕೇಂದ್ರಕ್ಕೆ ರಾಷ್ಟ್ರೀಯ ಮಾನ್ಯತಾ ಮಂಡಳಿ (ಎನ್ಎಬಿಎಚ್) ಮಾನ್ಯತಾ ಪ್ರಮಾಣ ಪತ್ರ ಲಭಿಸಿದೆ. ರಕ್ತದ ಗುಣಮಟ್ಟ ಮತ್ತು ಸುರಕ್ಷತೆಗಾಗಿ ಈ ಪ್ರಮಾಣಪತ್ರ ದೊರೆತಿದ್ದು, ಇದರಿಂದ ಆಸ್ಪತ್ರೆಯ ಗುಣಮಟ್ಟ ಮತ್ತು ಮಾನ್ಯತೆಗಳ ಕಿರೀಟಕ್ಕೆ ಇನ್ನೊಂದು ಗರಿ ಸೇರ್ಪಡೆಯಾಗಿದೆ. ಮಾಹೆ (ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ)ಯ ಸಹ ಕುಲಾಧಿಪತಿ ಡಾ.‌ ಎಚ್.ಎಸ್. ಬಲ್ಲಾಳ್ ಅವರು ಎನ್ಎಬಿಎಚ್ ಮಾನ್ಯತೆ ಪ್ರಮಾಣ ಪತ್ರವನ್ನು ಕಸ್ತೂರ್ಬಾ ಆಸ್ಪತ್ರೆ ರಕ್ತ ಕೇಂದ್ರದ ನಿರ್ದೇಶಕಿ ಡಾ. ಶಮೀ ಶಾಸ್ತ್ರಿ ಅವರಿಗೆ ಹಸ್ತಾಂತರಿಸಿದರು. […]