ನಿಮ್ಮ ಆಧಾರ್ ಸಂಖ್ಯೆಯನ್ನು ಲಾಕ್ ಮಾಡುವ ಮೂಲಕ ದುರ್ಬಳಕೆಯನ್ನು ತಪ್ಪಿಸಿಕೊಳ್ಳಿ: ಇಲ್ಲಿದೆ ಲಾಕ್ ಮತ್ತು ಅನ್ ಲಾಕ್ ವಿಧಾನ
ಭಾರತೀಯ ನಿವಾಸಿಗಳಿಗೆ ಭಾರತೀಯ ಸರಕಾರವು ಅನನ್ಯ ಗುರುತಿನ ಸಂಖ್ಯೆಯ ಆಧಾರ್ ಕಾರ್ಡ್ ಅನ್ನು ನೀಡಿದೆ. ಭಾರತದಲ್ಲಿ ವಾಸಿಸುವ ಭಾರತೀಯ ನಾಗರಿಕತ್ವವನ್ನು ಹೊಂದಿರುವ ಪ್ರತಿಯೊಬ್ಬರ ಬಳಿಯೂ ಆಧಾರ್ ಕಾರ್ಡ್ ಇರುವುದು ಕಡ್ಡಾಯ. ಆದಾಗ್ಯೂ, ಆಧಾರ್ ಕಾರ್ಡ್ ಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಘಟನೆಗಳು ಆಗ್ಗಿಂದಾಗ್ಗೆ ಕೇಳಿಬರುತ್ತಿರುತ್ತವೆ. ತಮ್ಮ ಆಧಾರ್ ಸಂಖ್ಯೆಯನ್ನು ಸಮಾಜಘಾತುಕ ಶಕ್ತಿಗಳ ಕೈಗೆ ಸಿಗದಂತೆ ನೋಡಿಕೊಳ್ಳಲು ಆಧಾರ್ ಲಾಕ್ ಮತ್ತು ಅನ್ ಲಾಕ್ ವ್ಯವಸ್ಥೆಯನ್ನು ನೀಡಲಾಗಿದೆ. ನಿವಾಸಿಗಳ, ವೈಯಕ್ತಿಕ ಡೇಟಾದ ಸುರಕ್ಷತೆ ಮತ್ತು ಗೌಪ್ಯತೆ ಯಾವಾಗಲೂ ಪ್ರಾಥಮಿಕ ಕಾಳಜಿಯಾಗಿದೆ. ನಿವಾಸಿಗಳ […]