ಜೊತೆಗಿದ್ದ ಸ್ನೇಹಿತರು ನನ್ನ ಕೈಬಿಟ್ಟು ಒಬ್ಬಂಟಿ ಮಾಡಿದರು: ಎಚ್‌. ವಿಶ್ವನಾಥ್‌ ಬೇಸರದ ನುಡಿ

ಚಿತ್ರದುರ್ಗ: ಜೊತೆಗಿದ್ದ ಸ್ನೇಹಿತರೆಲ್ಲರೂ ನನ್ನನ್ನು ಕೈಬಿಟ್ಟರು. ಅವರು ಸಚಿವರಾದರು. ನಾನು ಗಟ್ಟಿಧ್ವನಿಯಲ್ಲಿ ಮಾತನಾಡಿ ಒಬ್ಬಂಟಿಯಾದೆ. ರಾಜ್ಯದ ಜನರು ನನ್ನ ಜೊತೆಗಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಎಚ್‌.ವಿಶ್ವನಾಥ್‌ ಬೇಸರ ವ್ಯಕ್ತಪಡಿಸಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬೈಗೆ ತೆರಳಿದ 17 ಜನ ಶಾಸಕರ ತಂಡವನ್ನು ನಾನು ಮುನ್ನೆಡಿಸಿದ್ದೆ. ಮಂತ್ರಿಯಾಗಬೇಕೆಂಬ ಉದ್ದೇಶದಿಂದ ಬಿಜೆಪಿಗೆ ಬಂದಿಲ್ಲ. ಸಚಿವ ಸ್ಥಾನವನ್ನು ಮತ್ತೆ ಕೇಳುವುದಿಲ್ಲ. ರಾಜ್ಯದಲ್ಲಿ ಗಟ್ಟಿಧ್ವನಿ ಕೇಳಿಸುತ್ತದೆ ಹೊರತು, ಹೇಡಿ ಧ್ವನಿಯಲ್ಲ’ ಎಂದರು.