ಹೆಮ್ಮಾಡಿ: ಮೂವತ್ತುಮುಡಿ ನದಿಯಲ್ಲಿ ಮೃತದೇಹ ಪತ್ತೆ

ಹೆಮ್ಮಾಡಿ: ವ್ಯಕ್ತಿಯೋರ್ವನ ಮೃತದೇಹ ಬುಧವಾರ ಬೆಳಗ್ಗೆ ಹೆಮ್ಮಾಡಿ ಸಮೀಪದ ಮೂವತ್ತುಮುಡಿ ನದಿಯಲ್ಲಿ ಪತ್ತೆಯಾಗಿದೆ.  ಪಡುಕೋಣೆ ನಿವಾಸಿ ನಾರಾಯಣ ಚಂದನ್ (60) ಮೃತ ದುರ್ದೈವಿ.  ಪತ್ನಿಯ ಮನೆಗೆ ಹೋಗುತ್ತೇನೆಂದು ಸೋಮವಾರ ಪಡುಕೋಣೆಯ ತಮ್ಮ ಮನೆಯಿಂದ ತೆರಳಿದ್ದ ನಾರಾಯಣ ಚಂದನ್ ಸಂಜೆ ಅರಾಟೆಯಲ್ಲಿರುವ ತಮ್ಮ ಪತ್ನಿಯ ಮನೆಗೆ ಬಂದಿದ್ದರು. ವೃದ್ದಾಪ್ಯ ವೇತನಕ್ಕೆ ಅರ್ಜಿ ಸಲ್ಲಿಸುವ ತರಾತುರಿಯಲ್ಲಿದ್ದ ಅವರು ರಾತ್ರಿ ಪತ್ನಿಯ ಮನೆಯಲ್ಲೇ ಉಳಿದುಕೊಂಡಿದ್ದು, ಮಂಗಳವಾರ ಬೆಳಗ್ಗೆ ಪತ್ನಿಯ ಮನೆಯಿಂದ ವೃದ್ದಾಪ್ಯ ವೇತನಕ್ಕೆ ಅರ್ಜಿ ನೀಡಲು ತೆರಳುತ್ತೇನೆಂದು ಹೇಳಿ ಹೋದವರು ಮತ್ತೆ […]