ಸಂಗೀತ ವಿದುಷಿ ವಸಂತಿ ರಾಮ‌ಭಟ್ ನಿಧನ

ಉಡುಪಿ: ಖ್ಯಾತ ಸಂಗೀತ ವಿದುಷಿ ವಸಂತಿ ರಾಮ‌ಭಟ್ (82) ಅವರು ಭಾನುವಾರ ನಿಧನರಾದರು. ವಸಂತಿ ಎಂ.ಜಿ.ಎಂ.ಕಾಲೇಜಿನ ಪ್ರಾಂಶುಪಾಲರಾಗಿದ್ದ ಪ್ರೊ.ರಾಮ ಭಟ್ ಅವರ ಧರ್ಮಪತ್ನಿ. ರಾಗಧನ ಸಂಸ್ಥೆಯ ಸಕ್ರಿಯ ಕಾರ್ಯಕಾರಿ ಸಮಿತಿ ಸದಸ್ಯೆ. ಹಲವಾರು ಸಂಗೀತಗಾರರಿಗೆ ಸಾಥ್ ನೀಡಿದ ಉಡುಪಿಯ ಹೆಮ್ಮೆಯ ಕಲಾವಿದೆ. ನೂರಾರು ಶಿಷ್ಯರಿಗೆ ವಯಲಿನ್ ತರಬೇತಿ ನೀಡಿರುತ್ತಾರೆ. ಮಗ ಡಾ.ಸತೀಶ್, ನೇತ್ರ ತಜ್ಞ, ಮಗಳು ವಿನಯ ಕಂಪ್ಯೂಟರ್ ಇಂಜಿನಿಯರ್. ಪುತ್ರ ದೇವೇಶ್ ಭಟ್ ಮೃದಂಗ ವಿದ್ವಾನ್. ತಾಯಿಯ ತಂದೆ ಪಿಡ್ಲು ಕೃಷ್ಣರಾಯರು, ಉಡುಪಿ ಲಕ್ಷ್ಮೀ ಬಾಯಿ […]