ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ರಾಜನ್ ಇನ್ನಿಲ್ಲ
ಬೆಂಗಳೂರು: ಖ್ಯಾತ ಸಂಗೀತ ನಿರ್ದೇಶಕ ರಾಜನ್ (87) ಅವರು ಭಾನುವಾರ ರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದರು. ರಾಜನ್ ಅವರು ಮೂಲತಃ ಮೈಸೂರಿನವರು. ಬೆಂಗಳೂರಿನಲ್ಲಿ ನೆಲೆಸಿದ್ದರು. ಇವರು ತಮ್ಮ ಸಹೋದರ ನಾಗೇಂದ್ರ ಅವರ ಜೊತೆ ಸೇರಿ ಹಲವು ಸಿನಿಮಾಗಳಲ್ಲಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಹಾಗಾಗಿ ಇವರಿಬ್ಬರನ್ನು ಚಿತ್ರರಂಗ ರಾಜನ್ -ನಾಗೇಂದ್ರ ಜೋಡಿ ಎಂದು ಗುರುತಿಸುತ್ತದೆ. 1950ರಿಂದ 1990ರ ವರೆಗೆ ಕನ್ನಡದಲ್ಲಿ ಹಲವಾರು ನಿಸಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಕನ್ನಡ, ತೆಲುಗು, ಹಿಂದಿ, ತಮಿಳು, ಮಲಯಾಳಂ, ತುಳು ಸಹಿತ ವಿವಿಧ ಭಾಷೆಗಳಲ್ಲಿ […]