ಬಾರ್ ಮಾಲೀಕ ಮನೀಶ್ ಶೆಟ್ಟಿ ಕೊಲೆ: ರೌಡಿಶೀಟರ್ ಕಿಶನ್ ಹೆಗ್ಡೆ ಹತ್ಯೆಗೆ ಪ್ರತೀಕಾರ

ಬೆಂಗಳೂರು: ಗುರುವಾರ ರಾತ್ರಿ ನಡೆದ ಬೆಂಗಳೂರಿನ ಬ್ರಿಗೇಡ್ ರಸ್ತೆ ಸಮೀಪದ ಡ್ಯೂಯೆಟ್ ಬಾರ್‌ ಮಾಲೀಕ ಮನೀಶ್ ಶೆಟ್ಟಿ ಕೊಲೆ ಪ್ರಕರಣ ಇದೀಗ ಭೂಗತ ಜಗತ್ತಿನೊಂದಿಗೆ ನಂಟು ಬೆಸೆದುಕೊಳ್ಳುತ್ತಿದೆ. ಇತ್ತೀಚೆಗೆ ಹಿರಿಯಡಕದಲ್ಲಿ ನಡೆದ ರೌಡಿಶೀಟರ್ ಕಿಶನ್ ಹೆಗ್ಡೆ ಕೊಲೆಗೆ ಸಂಬಂಧಿಸಿದಂತೆ ಮನೀಶ್ ಶೆಟ್ಟಿ ಹಣಕಾಸಿನ ಸಹಕಾರ ನೀಡಿದ್ದನು. ಕಿಶನ್ ಹೆಗ್ಡೆಯನ್ನು ಕೊಲೆ ಮಾಡಲು ಮನೋಜ್ ಕೋಡಿಕೆರೆ ಸಹಚರರಿಗೆ ಫೈನಾನ್ಸ್ ಮಾಡಿದ್ದನು. ಕಿಶನ್ ಹೆಗ್ಡೆ ಭೂಗತ ಪಾತಕಿ ವಿಕ್ಕಿ ಶೆಟ್ಟಿಯ ಆಪ್ತನಾಗಿದ್ದ. ಹೀಗಾಗಿ ವಿಕ್ಕಿ ಶೆಟ್ಟಿಯ ಗ್ಯಾಂಗ್​ನಿಂದ ಮನೀಶ್ ಕೊಲೆಯಾಗಿರುವ […]