ಗುಣಮಟ್ಟದ ಶಿಕ್ಷಣದಲ್ಲಿ ಅಂತರಾಷ್ಟ್ರೀಯ ಅವಕಾಶಗಳಿವೆ: ಡಾ| ಬಲ್ಲಾಳ್
ಉಡುಪಿ: ಗುಣಮಟ್ಟದ ಶಿಕ್ಷಣದಲ್ಲಿ ಅಂತಾರಾಷ್ಟ್ರೀಯ ಅವಕಾಶಗಳಿವೆ ಎಂದು ಮಣಿಪಾಲ ಮಾಹೆ ವಿ.ವಿ.ಯ ಸಹಕುಲಾಧಿಪತಿ ಡಾ| ಎಚ್. ಎಸ್. ಬಲ್ಲಾಳ್ ಹೇಳಿದರು. ಮಣಿಪಾಲದಲ್ಲಿ ಶುಕ್ರವಾರ ಮಣಿಪಾಲ್ ಯುನಿವರ್ಸಲ್ ಪ್ರಸ್‌ನ (ಎಂಯುಪಿ) 155ನೇ ಪ್ರಕಾಶನವಾದ ‘ಇಂಟರ್‌ನ್ಯಾಶನಲೈಸೇಶನ್ ಆಫ್ ಹೈಯರ್ ಎಜುಕೇಶನ್: ದಿ ಡೈನಾಮಿಕ್ಸ್ ಆಫ್ ಎಜುಕೇಶನಲ್ ಇಕಾಲಜಿ’ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಶಿಕ್ಷಣದ ಅಂತಾರಾಷ್ಟ್ರೀಕರಣದ ಪಾತ್ರವನ್ನು ಪುಸ್ತಕ ಪ್ರತಿಫಲಿಸುತ್ತಿದೆ. ಇದಕ್ಕೆ ಪೂರಕವಾಗಿ ವಿದೇಶಗಳ ವಿ.ವಿ.ಗಳೊಂದಿಗೆ ವಿನಿಮಯ, ಟ್ವಿನ್ನಿಂಗ್ ಕಾರ್ಯಕ್ರಮಗಳು, ವಿದ್ಯಾರ್ಥಿ ವಿನಿಮಯ ಇತ್ಯಾದಿ ಕಾರ್ಯಕ್ರಮಗಳನ್ನು ಮಾಹೆ ವಿ.ವಿ. ಜಾರಿಗೊಳಿಸಿದೆ ಎಂದವರು […]