ದಕ್ಷ, ಪರಿಸರವಾದಿ ಯುವ ಅರಣ್ಯಾಧಿಕಾರಿಯ ಎತ್ತಂಗಡಿಗೆ ಉಡುಪಿ ಜಿಲ್ಲಾ ರಾಜಕಾರಣಿಗಳ ಸಂಚು: ಪರಿಸರ ಕಳ್ಳರಿಗೆ ಸಿಂಹಸ್ವಪ್ನವಾಗಿರೋ ಖಡಕ್ ಅಧಿಕಾರಿಗೆ ಬೇಕಿದೆ ನಮ್ಮ ಬೆಂಬಲ

-ಉಡುಪಿ xpress ಫೋಕಸ್ ಇವರು ಪರಿಸರವನ್ನು ಕೊಳ್ಳೆ ಹೊಡೆಯುವ ಯಾವ ವ್ಯಕ್ತಿಯನ್ನೂ ಸುಮ್ಮನೆ ಬಿಡಲ್ಲ. ಅವರು ರಾಜಕಾರಣಿಯಾಗಿರಲಿ, ಸಾಮಾನ್ಯ ಮನುಷ್ಯನಾಗಿರಲಿ,ಯಾವ ಪಕ್ಷದವರೇ ಆಗಿರಲಿ ಅವರ ಜಾತಕ ಹೊರಗೆ ಹಾಕಿ ಅವರಿಗೆ ಮಾಡಬೇಕಾದ ಶಾಸ್ತಿ ಮಾಡುತ್ತಾರೆ. ಪರಿಸರ ಹಾಳು ಮಾಡುವ ಯಾವನಾದರೂ ಸರಿ ಅವನಿಗೆ ಶಿಕ್ಷೆ ನೀಡದೇ ಇರಬಾರದು ಎನ್ನುವ ನಿಲುವಿನ ಈ ದಕ್ಷ ಯುವ ಅಧಿಕಾರಿಯೇ ಮುನಿರಾಜು. ಹೆಬ್ರಿ ತಾಲೂಕು ವಲಯ ಅರಣ್ಯಾಧಿಕಾರಿಯಾಗಿರುವ ಇವರು  ಭಾನುವಾರವಷ್ಟೇ  ಚಾರ ಗ್ರಾಮದ ಮತ್ತು ಬಿಜೆಪಿಯ ಬೇಳಂಜೆ ಜನಪ್ರತಿನಿಧಿ ಅಮೃತ್ ಕುಮಾರ್ […]