ಹೊಸ ವೈಶಿಷ್ಟ್ಯ ಜಾರಿಗೆ ತರ್ತಿದೆ RBI : ನಿಮ್ಮ ಧ್ವನಿಯ ಮೂಲಕವೇ ಯುಪಿಐ ಪೇಮೆಂಟ್
ಮುಂಬೈ: ಸುರಕ್ಷಿತ ಮತ್ತು ಸುಭದ್ರ ರೀತಿಯಲ್ಲಿ ಹಣಕಾಸು ವಹಿವಾಟುಗಳನ್ನು ಪ್ರಾರಂಭಿಸಲು ಮತ್ತು ಪೂರ್ಣಗೊಳಿಸಲು ಬಳಕೆದಾರರಿಗೆ ಅನುವು ಮಾಡಿಕೊಡುವ “ಸಂಭಾಷಣಾ ಪಾವತಿ” (conversational payments) ಯೋಜನೆಯ ಮೇಲೆ ಆರ್ಬಿಐ ಕೆಲಸ ಮಾಡುತ್ತಿದೆ ಎಂದು ಗವರ್ನರ್ ತಿಳಿಸಿದ್ದಾರೆ.ಧ್ವನಿ ಅಥವಾ ಸಂಭಾಷಣೆಯ ಮೂಲಕವೇ ಯುಪಿಐ ಪಾವತಿಗಳನ್ನು ಪೂರ್ಣಗೊಳಿಸಬಹುದಾದ ವ್ಯವಸ್ಥೆಯೊಂದನ್ನು ಆರ್ಬಿಐ ಜಾರಿಗೆ ತರುತ್ತಿದೆ. ಧ್ವನಿಯ ಮೂಲಕ ಹಣ ಪಾವತಿಸುವ ವ್ಯವಸ್ಥೆಯೊಂದನ್ನು ಜಾರಿಗೊಳಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಸಿದ್ಧತೆ ನಡೆಸಿದೆ. ಪ್ರಸ್ತಾವಿತ ಸಂಭಾಷಣಾ ಪಾವತಿ ವ್ಯವಸ್ಥೆಯು ಕೃತಕ ಬುದ್ಧಿಮತ್ತೆ ಚಾಲಿತವಾಗಿರುತ್ತದೆ ಎಂಬುದು […]