ಕಾಲೇಜಿನಲ್ಲಿ ಭಾಷಣ ಮಾಡುತ್ತಲೇ ಕುಸಿದು ಬಿದ್ದು ವಿದ್ಯಾರ್ಥಿನಿ ಮೃತ್ಯು.

ಮುಂಬೈ: ಮಹಾರಾಷ್ಟ್ರದ ಧಾರಶಿವ್ ಜಿಲ್ಲೆಯ ಕಾಲೇಜೊಂದರಲ್ಲಿ 20 ವರ್ಷದ ಕಾಲೇಜು ವಿದ್ಯಾರ್ಥಿನಿ ಸೆಂಡಾಫ್‌ ಪಾರ್ಟಿಯಲ್ಲಿ ವಿದಾಯ ಭಾಷಣ ಮಾಡುತ್ತಿರುವಾಗ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ‌. ವರ್ಷಾ ಖಾರತ್‌ (20) ಮೃತ ವಿದ್ಯಾರ್ಥಿನಿಯಾಗಿದ್ದು, ಆರ್‌ಜಿ ಶಿಂಧೆ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಎಸ್‌ಸಿ ವ್ಯಾಸಂಗ ಮಾಡುತ್ತಿದ್ದಳು. ವಿದ್ಯಾರ್ಥಿನಿ ಕುಸಿದು ಬಿದ್ದ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದು, ಏಪ್ರಿಲ್‌ 5ರಂದು ಈ ಘಟನೆ ನಡೆದಿದೆ. 32 ಸೆಕೆಂಡುಗಳ ವಿಡಿಯೋ ಕ್ಲಿಪ್‌ನಲ್ಲಿ ಮನಕಲುಕುವ ದೃಶ್ಯ ಸೆರೆಯಾಗಿದೆ. ಅಂದ ಚೆಂದದ ಸೀರೆಯುಟ್ಟು […]