ಹೊಸ ಮ್ಯೂಚುವಲ್ ಫಂಡ್​ ಕಂಪನಿ ಆರಂಭಿಸಿದ ಅಂಬಾನಿ : ಜಿಯೋ ಬ್ಲ್ಯಾಕ್‌ರಾಕ್

ಮುಂಬೈ: ಭಾರತದಲ್ಲಿ ಲಕ್ಷಾಂತರ ಹೂಡಿಕೆದಾರರಿಗೆ ತಂತ್ರಜ್ಞಾನ ಆಧರಿತ ಕೈಗೆಟುಕುವ, ನವೀನ ಹೂಡಿಕೆ ವಿಧಾನಗಳನ್ನು ಜಿಯೋ ಬ್ಲ್ಯಾಕ್‌ರಾಕ್ ನೀಡಲಿದೆ ಎಂದು ಬ್ಲ್ಯಾಕ್‌ರಾಕ್‌ ಮತ್ತು ಜಿಯೋ ಫೈನಾನ್ಷಿಯಲ್​ನ ಜಂಟಿ ಉದ್ಯಮವಾಗಿರುವ ಜಿಯೋ ಬ್ಲ್ಯಾಕ್‌ರಾಕ್​ನ ಹೇಳಿಕೆ ತಿಳಿಸಿದೆ.ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನಿಂದ ವಿಭಜನೆಗೊಂಡ, ಹಣಕಾಸು ಸಾಲ ನೀಡುವ ಕಂಪನಿ ಜಿಯೋ ಫೈನಾನ್ಶಿಯಲ್ ಸರ್ವಿಸಸ್ ಲಿಮಿಟೆಡ್ ಮತ್ತು ವಿಶ್ವದ ಅತಿದೊಡ್ಡ ಅಸೆಟ್ ಮ್ಯಾನೇಜಮೆಂಟ್​ ಕಂಪನಿ ಬ್ಲ್ಯಾಕ್‌ರಾಕ್ ಎರಡೂ ಒಟ್ಟಾಗಿ ಸೇರಿ 300 ಮಿಲಿಯನ್ ಡಾಲರ್ ಸಂಯೋಜಿತ ಹೂಡಿಕೆಯೊಂದಿಗೆ ಹೊಸ ಅಸೆಟ್ ಮ್ಯಾನೇಜಮೆಂಟ್​ ಕಂಪನಿ ಅಥವಾ […]