ನಿಮ್ಮ ಕಾರನ್ನು ಬಾಂಬ್ ಮೂಲಕ ಸ್ಪೋಟಿಸ್ತೇವೆ: ಮತ್ತೆ ಸಲ್ಮಾನ್ ಖಾನ್ ಗೆ ಜೀವಬೆದರಿಕೆ:

ಮುಂಬಯಿ: ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಮತ್ತೆ ಜೀವಬೆದರಿಕೆ ಕರೆ ಬರತೊಡಗಿದ ಸುದ್ದಿ ಬಾಲಿವುಡ್ ನಲ್ಲಿ ಸಂಚಲನ ಸೃಷ್ಟಿಸಿದೆ.ಈ ಹಿಂದೆ ಎರಡು ಬಾರಿ ಸಲ್ಲುಗೆ ಜೀವ ಬೆದರಿಕೆ ಬಂದಿತ್ತು.ಇದೀಗ ಮತ್ತೆ ಬೆದರಿಕೆ ಹಾಕಿದ ಸಂದೇಶವೊಂದು ಮುಂಬೈ ಪೊಲೀಸರಿಗೆ ಸಿಕ್ಕಿದೆ. ಈ ಕುರಿತು ಪ್ರಕರಣ ದಾಖಲಿಸಲಾಗಿದೆ. ಸಂಚಾರ ಪೊಲೀಸರ ವಾಟ್ಸಾಪ್ ಸಹಾಯವಾಣಿಗೆ ಭಾನುವಾರ ಒಂದು ಬೆದರಿಕೆ ಸಂದೇಶವೊಂದು ಬಂದಿದೆ. ಈ ಸಂದೇಶದಲ್ಲಿ ನಟ ಸಲ್ಮಾನ್ ಖಾನ್ ಕಾರನ್ನು ಸ್ಫೋಟಿಸುವುದಾಗಿ ಹಾಗೂ ಆತನ ನಿವಾಸಕ್ಕೆ ನುಗ್ಗಿಹೊಡೆಯುವುದಾಗಿ ಬೆದರಿಕೆ ಹಾಕಿದ್ದಾರೆ […]