ಮಲ್ಪೆ: ಗಮನ ಸೆಳೆದ ತ್ರಿವರ್ಣ ಆರ್ಟ್ ಸೆಂಟರ್ ವಿದ್ಯಾರ್ಥಿಗಳ ಮರಳು ಶಿಲ್ಪ
ಉಡುಪಿ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಮಣಿಪಾಲ ತ್ರಿವರ್ಣ ಆರ್ಟ್ ಸೆಂಟರ್ ಸಂಸ್ಥೆಯ ಹಿರಿಯ ಮಹಿಳಾ ವಿದ್ಯಾರ್ಥಿಗಳ ಬ್ಯಾಚ್ ನ ಆಯ್ದ 10 ಕಲಾವಿದರು ವಿ ಆರ್ ದ ಪವರ್ ಸಂದೇಶದಡಿ ಇಂದು ಮಲ್ಪೆ ಕಡಲ ಕಿನಾರೆಯಲ್ಲಿ ಮಹಿಳೆಯರ ಪಾತ್ರ ಹಾಗೂ ವಿವಿಧ ವೃತ್ತಿಯಲ್ಲಿ ಸಮನ್ವಯತೆ ಶಕ್ತಿ ತೋರುವ ಮರಳು ಶಿಲ್ಪ ರಚಿಸಿ ಗಮನ ಸೆಳೆದರು.