ಮುಳ್ಳಿಕಟ್ಟೆ: ಫೆ.6 ಕ್ಕೆ ಹೊಸಾಡು ಸೇವಾ ಸಹಕಾರ ಸಂಘ ಉದ್ಘಾಟನೆ
ಕುಂದಾಪುರ: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ “ಹೊಸಾಡು ಸೇವಾ ಸಹಕಾರ ಸಂಘ (ನಿ.)” ವು ಮುಳ್ಳಿಕಟ್ಟೆಯ ಬಾಲಾಜಿ ಕಾಂಪ್ಲೆಕ್ಸ್ ನ ಮೊದಲನೇ ಮಹಡಿಯಲ್ಲಿ ಇದೇ ಫೆ.6ರ ಭಾನುವಾರ ಬೆಳಿಗ್ಗೆ 9 ಗಂಟೆಗೆ ಉದ್ಘಾಟನೆಗೊಳ್ಳಲಿದೆ. ಕುಂದಾಪುರ ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಅರುಣ್ ಕುಮಾರ್ ಎಸ್.ವಿ. ನೂತನ ಸಂಘವನ್ನು ಉದ್ಘಾಟಿಸುವರು. ಹೊಸಾಡು ಸೇವಾ ಸಹಕಾರ ಸಂಘದ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಕಾಡೇರಿಮನೆ ಅಧ್ಯಕ್ಷತೆ ವಹಿಸಲಿದ್ದಾರೆ. ಹೆಚ್.ವಿಶ್ವೇಶ್ವರ ಅಡಿಗ, ಅಡಿಗರ ಮನೆ ಹೊಸಾಡು, ಮಂಜಯ್ಯ ಶೆಟ್ಟಿ ಜಾಜಿಮಕ್ಕಿ ಹೊಸಾಡು, […]