ಮೂಲ್ಕಿ: ಪ್ರಿಯಕರನೊಂದಿಗೆ ನವವಿವಾಹಿತೆ ಪರಾರಿ
ಮೂಲ್ಕಿ: ವಿವಾಹವಾದ ನಾಲ್ಕು ದಿನಗಳಲ್ಲೇ ಯುವತಿಯೊಬ್ಬಳು ಪ್ರಿಯಕರನೊಂದಿಗೆ ಪರಾರಿಯಾದ ಘಟನೆ ಮೂಲ್ಕಿ ಠಾಣಾ ವ್ಯಾಪ್ತಿಯ ಲಿಂಗಪ್ಪಯ್ಯಕಾಡು ಎಂಬಲ್ಲಿ ನಡೆದಿದೆ. ಮೂಲ್ಕಿ ಲಿಂಗಪ್ಪಯ್ಯಕಾಡು ನಿವಾಸಿ ಅರ್ಜುನ್ ಎಂಬುವರ ಪುತ್ರಿ ಚೈತ್ರಾ ಪರಾರಿಯಾದ ಯುವತಿ. ಈಕೆಗೆ ಶಿಕ್ಷಕರೊಬ್ಬರ ಜತೆ ಡಿ. 28ರಂದು ಪುನರೂರಿನ ಸಭಾಂಗಣವೊಂದರಲ್ಲಿ ಮದುವೆ ಮಾಡಲಾಗಿತ್ತು. ಆದರೆ ಯುವತಿ ಮದುವೆಯಾದ ನಾಲ್ಕೇ ದಿನಗಳಲ್ಲಿ ಚಿನ್ನ, ನಗದು ಸಹಿತ ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ. ಜ. 2ರಂದು ನಡುರಾತ್ರಿ ತಂದೆಯ ಮನೆಯಿಂದ ಪ್ರಿಯಕರ ಜಗನ್ ಪೂಜಾರಿ ಯಾನೆ ಜಗ್ಗು ಎಂಬಾತನೊಂದಿಗೆ ಬೈಕ್‌ನಲ್ಲಿ ತೆರಳಿದ್ದಾಳೆ. […]