ರಾಷ್ಟ್ರಪತಿ ಭವನದ ಮೊಘಲ್ ಗಾರ್ಡನ್ಸ್ ಇನ್ನು ಮುಂದು ‘ಅಮೃತ ಉದ್ಯಾನ’: ಮರುನಾಮಕರಣಕ್ಕೆ ಮುರ್ಮು ಅಸ್ತು
ಹೊಸದಿಲ್ಲಿ: “ಆಜಾದಿ ಕಾ ಅಮೃತ್ ಮಹೋತ್ಸವ್” ಆಚರಣೆಯ ಅಂಗವಾಗಿ ರಾಷ್ಟ್ರಪತಿಗಳ ಅಧಿಕೃತ ನಿವಾಸ, ರಾಷ್ಟ್ರಪತಿ ಭವನದಲ್ಲಿರುವ ಉದ್ಯಾನಗಳಿಗೆ “ಅಮೃತ ಉದ್ಯಾನ” ಎಂದು ಮರುನಾಮಕರಣ ಮಾಡಲಾಗಿದೆ. ಇದುವರೆಗೂ ಇಲ್ಲಿ ತೂಗುಹಾಕಲಾಗಿದ್ದ “ಮೊಘಲ್ ಗಾರ್ಡನ್ಸ್” ಎಂಬ ಹಳೆಯ ರಸ್ತೆ ಫಲಕವನ್ನು ತೆಗೆದು ಹಾಕಲಾಗಿದೆ. ಸ್ವಾತಂತ್ರ್ಯದ 75ನೇ ವರ್ಷವನ್ನು ಆಜಾದಿ ಕಾ ಅಮೃತ್ ಮಹೋತ್ಸವ ಎಂದು ಆಚರಿಸುವ ಸಂದರ್ಭದಲ್ಲಿ, ಭಾರತದ ರಾಷ್ಟ್ರಪತಿಗಳು ರಾಷ್ಟ್ರಪತಿ ಭವನದ ಉದ್ಯಾನಗಳಿಗೆ ಅಮೃತ್ ಉದ್ಯಾನ್ ಎಂದು ಸಾಮಾನ್ಯ ಹೆಸರನ್ನು ನೀಡಿದ್ದಾರೆ ಎಂದು ಅಧ್ಯಕ್ಷರ ಉಪ ಪತ್ರಿಕಾ ಕಾರ್ಯದರ್ಶಿ […]