ನಾಯಕನೆಂದರೆ ಅಹಂ ಅಲ್ಲ, ಜವಾಬ್ದಾರಿ: ವಿವೇಕ್ ಆಳ್ವ
ವಿದ್ಯಾಗಿರಿ: ನಾಯಕನೆಂದರೆ ಜವಾಬ್ದಾರಿ, ಅಹಂ ತೊರೆದು ವಿಧೇಯತೆಯಿಂದ ಕಾರ್ಯ ನಿರ್ವಹಿಸುವುದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು.ಇಲ್ಲಿನ ಮುಂಡ್ರುದೆಗುತ್ತು ಕೆ ಅಮರನಾಥ ಶೆಟ್ಟಿ ಸ್ಮಾರಕ ಸಭಾಂಗಣ (ಕೃಷಿ ಸಿರಿ ವೇದಿಕೆ) ದಲ್ಲಿ ಶನಿವಾರ ನಡೆದ ಪುತ್ತಿಗೆಯ ವಿವೇಕಾನಂದ ನಗರ ಆಳ್ವಾಸ್ ಕೇಂದ್ರೀಯ ಶಾಲೆಯ ‘ಸ್ವಾಗತ ದಿನ ಮತ್ತು ಇನ್ವೆಸ್ಟಿಚರ್ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು. ಪ್ರತಿಯೊಬ್ಬನಲ್ಲೂ ತಾನು ನಾಯಕನಾಗಬೇಕೆಂಬ ಹಂಬಲ ಇರಬೇಕು. ನಾಯಕನಾಗಲು ನಾನು ಅರ್ಹನಲ್ಲ ಎಂಬ ಹಿಂಜರಿಕೆ ಇರಬಾರದು. ಪ್ರತಿ ವಿದ್ಯಾರ್ಥಿಗಳು […]