ಆಳ್ವಾಸ್ ಕಾನೂನು ಕಾಲೇಜಿನ ‘ಕಾನೂನು ಕಾರ್ಯಕ್ರಮ’ಕ್ಕೆ ಚಾಲನೆ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಸಂಸ್ಥೆಗಳು ‘ಆಧುನಿಕ ನಲಂದಾ ವಿಶ್ವವಿದ್ಯಾಲಯ’ ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ಬಣ್ಣಿಸಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಕಾನೂನು ಕಾಲೇಜಿನ ‘ಕಾನೂನು ಕಾರ್ಯಕ್ರಮ’ವನ್ನು ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು. ಆಳ್ವಾಸ್ ಆವರಣ ಕಂಡಾಗ ನಲಂದಾ ವಿಶ್ವವಿದ್ಯಾಲಯದ ನೆನಪು ಅನುರಣಿಸಿತು. ಆಳ್ವಾಸ್ ನಲ್ಲಿ ನಡೆಸುವ ಪ್ರತಿ ಕಾರ್ಯಕ್ರಮ ಅಭೂತಪೂರ್ವ, ಅದ್ವಿತೀಯ ಎಂದು ಶ್ಲಾಘಿಸಿದರು. ದೀಪಾವಳಿ ಸನಿಹದಲ್ಲಿ ಸಂಕ್ರಾಂತಿ ಬಂದ ಹಾಗೆ, ಈ ಕಾರ್ಯಕ್ರಮ […]