ಹರಿ ಶಯನೀ ಏಕಾದಶಿ ಪ್ರಯುಕ್ತ ಶ್ರೀಕೃಷ್ಣ ಮಠದಲ್ಲಿ ಮುದ್ರಾಧಾರಣೆ

ಉಡುಪಿ: ಹರಿ ಶಯನೀ ಏಕಾದಶಿಯಂದು ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಪರ್ಯಾಯ ಮಠದ ಪುರೋಹಿತರಾದ ಶ್ರೀನಿವಾಸ ಉಪಾಧ್ಯಾಯರು ಸುದರ್ಶನ ಹೋಮದ ಪೂರ್ಣಾಹುತಿ ನಡೆಸಿದರು. ಪರ್ಯಾಯ ಶ್ರೀಪಾದರು ಮುದ್ರಾಧಾರಣೆಯನ್ನು ಮಾಡಿಕೊಂಡು ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು, ಅದಮಾರು ಕಿರಿಯ ಮಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಹಾಗೂ ಶೀರೂರು ಮಠಾಧೀಶರಾದ ಶ್ರೀವೇದವರ್ಧನತೀರ್ಥ ಶ್ರೀಪಾದರಿಗೆ ಪರ್ಯಾಯ ಶ್ರೀಪಾದರು ಮುದ್ರಾಧಾರಣೆಯನ್ನು ನಡೆಸಿದರು. ನಂತರ ಆಗಮಿಸಿದ ಸಹಸ್ರಾರು ಭಕ್ತಾದಿಗಳಿಗೆ ಪರ್ಯಾಯ ಶ್ರೀ ಪಾದರು,ಕಾಣಿಯೂರು ಶ್ರೀಪಾದರು,ಅದಮಾರು ಕಿರಿಯ ಶ್ರೀಪಾದರು ತಪ್ತ […]