ಮಧ್ಯಪ್ರದೇಶದಲ್ಲಿ 300 ಅಡಿ ಆಳದ ಕೊಳವೆ ಬಾವಿಗೆ ಬಿದ್ದ 2.5 ವರ್ಷದ ಮಗು: ರಕ್ಷಣಾ ಕಾರ್ಯ ಜಾರಿ
ಭೋಪಾಲ್: ಮಧ್ಯಪ್ರದೇಶದ ಸೆಹೋರ್ ಜಿಲ್ಲೆಯ ಹೊಲವೊಂದರಲ್ಲಿ ಆಟವಾಡುತ್ತಿದ್ದ 2.5 ವರ್ಷದ ಮಗು 300 ಅಡಿ ಆಳದ ಕೊಳವೆಬಾವಿಗೆ ಬಿದ್ದಿದ್ದು, ಮಂಗಳವಾರ ಮಧ್ಯಾಹ್ನದಿಂದ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಬೋರ್‌ವೆಲ್‌ನಲ್ಲಿ ಗಂಟೆಗಟ್ಟಲೆ ಸಿಲುಕಿರುವ ಮಗುವನ್ನು ರಕ್ಷಿಸಲು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಮುಂಗೋಲಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮಗು ಹೊಲದಲ್ಲಿ ಆಟವಾಡುತ್ತಿದ್ದ ವೇಳೆ ಕೊಳವೆ ಬಾವಿಯೊಳಗೆ ಬಿದ್ದಿದೆ. 50 ಅಡಿ ಕೆಳಗೆ ಬಿದ್ದಿರುವ ಮಗುವನ್ನು ರಕ್ಷಿಸಲು ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ ಎಂದು ಸೆಹೋರ್ ಜಿಲ್ಲಾಧಿಕಾರಿ […]
ಸಂಸದರ ನಿಧಿ ಬಳಕೆಯಲ್ಲಿ ಕರ್ನಾಟಕಕ್ಕೆ 16ನೇ ಸ್ಥಾನ
ನವದೆಹಲಿ: ಬಿಜೆಪಿಯ 25 ಸೇರಿದಂತೆ 28 ಸಂಸದರನ್ನು ಹೊಂದಿರುವ ಕರ್ನಾಟಕವು, ಸಂಸದ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಲೋಕಸಭಾ ಸದಸ್ಯರಿಗೆ ಮೀಸಲಿಟ್ಟ 140 ಕೋಟಿ ರೂ.ಗಳಲ್ಲಿ 20 ಕೋಟಿ (ಶೇ. 14) ಮಾತ್ರ ಬಳಸಿಕೊಂಡಿದೆ. ನಿಧಿ ಬಳಕೆಯಲ್ಲಿ ರಾಜ್ಯ 16ನೇ ಸ್ಥಾನದಲ್ಲಿದೆ. ಕೇಂದ್ರ ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು ಬುಧವಾರ ಕೇಂದ್ರ ಬಜೆಟ್ ಮಂಡನೆಗೆ ಮುನ್ನ 2022-2023ರಲ್ಲಿ ನಿಧಿಯ ಬಳಕೆಯ ಹೇಳಿಕೆಗಳನ್ನು ಬಿಡುಗಡೆ ಮಾಡಿದೆ. ವರದಿಯ ಪ್ರಕಾರ, ಕರ್ನಾಟಕದ ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರು ಇಬ್ಬರೂ ಒಟ್ಟಾಗಿ […]
ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಜಿಲ್ಲೆಗೆ 1 ಕೋಟಿ 15 ಲಕ್ಷಕ್ಕೂ ಅಧಿಕ ಮೊತ್ತ ಮಂಜೂರು
ಉಡುಪಿ: ಜನವರಿ 2020 ರಿಂದ ಡಿಸೆಂಬರ್ 2022 ರ ತನಕ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ(PMNRF) ಯಿಂದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಡುಪಿ ಜಿಲ್ಲೆಗೆ ಮಾನ್ಯ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರ ಶಿಫಾರಸ್ಸಿನ ಮೇರೆಗೆ ಸುಮಾರು ರೂಪಾಯಿ 1,15,60,000(ಒಂದು ಕೋಟಿ ಹದಿನೈದು ಲಕ್ಷದ ಅರ್ವತ್ತು ಸಾವಿರ ರೂಪಾಯಿ)ಮೊತ್ತವನ್ನು ರೋಗಿಗಳ ಚಿಕಿತ್ಸೆಗೆ ಮಂಜೂರು ಮಾಡಲಾಗಿದೆ ಎಂದು ಸಂಸದರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.
ಮಾಜಿ ಕೇಂದ್ರ ಸಚಿವ ಶರದ್ ಯಾದವ್ ನಿಧನ
ನವದೆಹಲಿ: ಮಾಜಿ ಕೇಂದ್ರ ಸಚಿವ ಮತ್ತು ಆರ್.ಜೆ.ಡಿ ನಾಯಕ ಶರದ್ ಯಾದವ್ ಅವರು 75 ನೇ ವಯಸ್ಸಿನಲ್ಲಿ ಜನವರಿ 12 ರಂದು ಗುರುವಾರ ನಿಧನರಾಗಿದ್ದಾರೆ. ಅವರ ಪುತ್ರಿ ಸುಭಾಷಿಣಿ ಶರದ್ ಯಾದವ್ ಅವರು ಈ ಸುದ್ದಿಯನ್ನು ಟ್ವಿಟರ್‌ನಲ್ಲಿ ಖಚಿತಪಡಿಸಿದ್ದಾರೆ. ಮಾಜಿ ಸಚಿವರ ಆರೋಗ್ಯ ಹದಗೆಟ್ಟಿದ್ದು, ಅವರನ್ನು ಗುರುಗ್ರಾಮ್‌ನ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶರದ್ ಯಾದವ್ ಅವರನ್ನು “ಪ್ರಜ್ಞಾಹೀನ ಮತ್ತು ಸ್ಪಂದಿಸದ ಸ್ಥಿತಿಯಲ್ಲಿ” ತುರ್ತು ವಿಭಾಗಕ್ಕೆ ಕರೆತರಲಾಯಿತು ಮತ್ತು ಅವರಿಗೆ “ಯಾವುದೇ ನಾಡಿಮಿಡಿತ ಅಥವಾ ದಾಖಲಿಸಬಹುದಾದ ರಕ್ತದೊತ್ತಡ” ಇರಲಿಲ್ಲ […]
ಮಧ್ಯಪ್ರದೇಶದಲ್ಲಿ ತರಬೇತಿ ವಿಮಾನ ದೇವಸ್ಥಾನಕ್ಕೆ ಡಿಕ್ಕಿ: ಪೈಲಟ್ ಸಾವು
ರೇವಾ: ಶುಕ್ರವಾರ ಮುಂಜಾನೆ ಮಧ್ಯಪ್ರದೇಶದ ರೇವಾದಲ್ಲಿ ದೇವಸ್ಥಾನಕ್ಕೆ ಡಿಕ್ಕಿ ಹೊಡೆದ ನಂತರ ವಿಮಾನ ಅಪಘಾತದಲ್ಲಿ ಪೈಲಟ್ ಸಾವನ್ನಪ್ಪಿದ್ದಾರೆ. ಚೋರ್ಹಾಟಾ ಎಂಬಲ್ಲಿ ಈ ಘಟನೆ ನಡೆದಿದೆ. ಅಪಘಾತದ ನಂತರ ಪೈಲಟ್ ತೀವ್ರವಾಗಿ ಗಾಯಗೊಂಡಿದ್ದರು ಮತ್ತು ಅವರನ್ನು ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ. ವಿಮಾನವು ಪೈಲಟ್ ತರಬೇತಿ ಕಂಪನಿಗೆ ಸೇರಿತ್ತು. मध्य प्रदेश के रीवा में विमान हादसामंदिर से टकराया विमान, ट्रेनी पायलट की मौत दूसरे पायलट […]