ಸುರತ್ಕಲ್ ಟೋಲ್ ಗೇಟ್ ರದ್ದಿಗೆ ಕೇಂದ್ರ ಅಸ್ತು: ಟ್ವೀಟ್ ಮಾಡಿ ಮಾಹಿತಿ ನೀಡಿದ ಸಂಸದ
ಸುರತ್ಕಲ್: ಕಳೆದ ಏಳು ವರ್ಷಗಳ ನಿರಂತರ ಬೇಡಿಕೆ ಮತ್ತು ಎಡೆಬಿಡದ ಹೋರಾಟದ ಬಳಿಕ ಕಡೆಗೂ ಸುರತ್ಕಲ್ ಟೋಲ್ ಗೇಟ್ ರದ್ದಾಗಿ ಜನರಿಗೆ ನರಕದಿಂದ ಮುಕ್ತಿ ದೊರೆಯಲಿದೆ. ಟೋಲ್ ಗೇಟ್ ರದ್ದಾಗುವ ಬಗ್ಗೆ ದ.ಕ ಸಂಸದ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿ ತಿಳಿಸಿದ್ದಾರೆ. ಮಂಗಳೂರಿನ ಸುರತ್ಕಲ್ ಸಮೀಪದ ಟೋಲ್ ಸಂಗ್ರಹ ಕೇಂದ್ರ ರದ್ದಾಗಿದ್ದು, ನಮ್ಮ ಮನವಿಗೆ ಸೂಕ್ತವಾಗಿ ಸ್ಪಂದಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾಗರಿಕರ ಪರವಾಗಿ ಧನ್ಯವಾದಗಳು ಎಂದು […]