ಐ.ಎಮ್.ಡಿ.ಬಿ ಟಾಪ್ 10 ಅತ್ಯಂತ ಜನಪ್ರಿಯ ಭಾರತೀಯ ಚಲನಚಿತ್ರಗಳ ಪಟ್ಟಿಯಲ್ಲಿ ಮೂರು ಕನ್ನಡದ ಚಿತ್ರಗಳು: ಚಾರ್ಲಿ777, ಕಾಂತಾರ, ಕೆ.ಜಿ.ಎಫ್ ಚಾಪ್ಟರ್-2
2022 ರ ಟಾಪ್ 10 ಅತ್ಯಂತ ಜನಪ್ರಿಯ ಭಾರತೀಯ ಚಲನಚಿತ್ರಗಳ ಪಟ್ಟಿಯನ್ನು ಐ.ಎಮ್.ಡಿ.ಬಿ ಪ್ರಸ್ತುತಪಡಿಸಿದೆ. ಇಂಟರ್ನೆಟ್ ಚಲನಚಿತ್ರ ಡೇಟಾಬೇಸ್ ಪ್ರಕಾರ ಜನವರಿ 1 ಮತ್ತು ನವೆಂಬರ್ 7, 2022 ರ ನಡುವೆ ಭಾರತದಲ್ಲಿ ಥಿಯೇಟರ್ ಗಳಲ್ಲಿ ಅಥವಾ ಡಿಜಿಟಲ್ ವೇದಿಕೆಯಲ್ಲಿ ಬಿಡುಗಡೆಯಾದ ಎಲ್ಲಾ ಚಲನಚಿತ್ರಗಳ ಪೈಕಿ ಕನಿಷ್ಠ 25,000 ಮತಗಳೊಂದಿಗೆ ಸರಾಸರಿ 7 ಅಥವಾ ಹೆಚ್ಚಿನ ಐ.ಎಮ್.ಡಿ.ಬಿ ಬಳಕೆದಾರರ ರೇಟಿಂಗ್ ಅನ್ನು ಹೊಂದಿರುವ ಚಿತ್ರಗಳಲ್ಲಿ 10 ಚಲನಚಿತ್ರಗಳು ಜನಪ್ರಿಯತೆಯಲ್ಲಿ ಸ್ಥಿರತೆಯನ್ನು ಕಾಯ್ದುಕೊಂಡಿವೆ. ಈ 10 ಚಿತ್ರಗಳ ಪೈಕಿ […]
ಮಾಜಿ ಪ್ರಧಾನಿ ಇಂದಿರಾಗಾಂಧಿ ಅವತಾರದಲ್ಲಿ ಕಂಗನಾ ರಣೌತ್: ಎಮರ್ಜೆನ್ಸಿ ಆಧಾರಿತ ಚಿತ್ರದಲ್ಲಿ ಕಂಗನಾ ಪರಕಾಯ ಪ್ರವೇಶ
1975 ರ ತುರ್ತುಪರಿಸ್ಥಿತಿ ಘೋಷಣೆಯ ಮೇಲೆ ಆಧಾರಿತ ‘ಎಮರ್ಜೆನ್ಸಿ’ ಚಿತ್ರದಲ್ಲಿ ಬಾಲಿವುಡ್ ನಟಿ ಕಂಗನಾ ರಣೌತ್ ಥೇಟ್ ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿಯಂತೆಯೆ ಕಾಣಿಸಿಕೊಂಡಿದ್ದು, ಸಿನಿಪ್ರಿಯರ ಹುಬ್ಬೇರುವಂತೆ ಮಾಡಿದ್ದಾರೆ. ಈ ಹಿಂದೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಜೀವನಾಧಾರಿತ ‘ತಲೈವಿ’ ಚಿತ್ರದಲ್ಲಿಯೂ ಪರಕಾಯ ಪ್ರವೇಶ ಮಾಡಿ ತನ್ನ ನಟನಾ ಕೌಶಲ್ಯದಿಂದ ಸಿನಿಪ್ರಿಯರನ್ನು ದಂಗುಬಡಿಸಿದ್ದರು ಕಂಗನಾ. ಇಂಧಿರಾಗಾಂಧಿಯಂತೆ ಕಾಣಿಸಿಕೊಳ್ಳಲು ಆಸ್ಕರ್ ಪ್ರಶಸ್ತಿ ವಿಜೇತ ಸ್ಪೆಷಲ್ ಎಫೆಕ್ಟ್ ಮೇಕಪ್ ಕಲಾವಿದ ಡೇವಿಡ್ ಮಲಿನೋವ್ಸ್ಕಿ ಅವರನ್ನು ಕಂಗನಾ […]