ಉಪ್ಪಿ ಅಭಿಮಾನಿಗಳಲ್ಲಿ ಕುತೂಹಲ, ನಾಳೆ ಬಹುನಿರೀಕ್ಷಿತ ಯುಐ ಟೀಸರ್ ಅನಾವರಣ
ಕಥೆ ಕುರಿತು ಕಿಂಚಿತ್ತೂ ಸುಳಿವು ಬಿಟ್ಟುಕೊಟ್ಟಿಲ್ಲ ಚಿತ್ರತಂಡ. ಉಪ್ಪಿ ನಟನೆಯ ಅಥವಾ ನಿರ್ದೇಶನದ ಪ್ರತೀ ಸಿನಿಮಾ ಕೂಡ ವಿಭಿನ್ನ. ಹಾಗಾಗಿ ಉಪ್ಪಿ ಮುಂದಿನ ಸಿನಿಮಾ ಮೇಲೆ ಅಭಿಮಾನಿಗಳ ನಿರೀಕ್ಷೆ ಬೆಟ್ಟದಷ್ಟಿದೆ.ಕನ್ನಡ ಚಿತ್ರರಂಗದ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಮುಂದಿನ ಬಹುನಿರೀಕ್ಷಿತ ಸಿನಿಮಾ ‘ಯುಐ’. ಶೀರ್ಷಿಕೆಯಿಂದಲೇ ದಕ್ಷಿಣ ಚಿತ್ರರಂಗದಲ್ಲಿ ಸಖತ್ ಸದ್ದು ಮಾಡುತ್ತಿದೆ.ಬಹುನಿರೀಕ್ಷಿತ ಯುಐ ಟೀಸರ್ ನಾಳೆ ಬೆಳಗ್ಗೆ 10 ಗಂಟೆಗೆ ಅನಾವರಣಗೊಳ್ಳಲಿದೆ. ಚಿತ್ರತಂಡ ಎಡಿಟಿಂಗ್ ಕೆಲಸ ಚುರುಕುಗೊಳಿಸಿದೆ. ಚಿತ್ರದಲ್ಲಿ 200ಕ್ಕೂ ಹೆಚ್ಚು ಕ್ಯಾಮರಾಗಳನ್ನು ಬಳಸಿಕೊಳ್ಳಲಾಗಿದೆ. 3ಡಿ ಬಾಡಿ […]