ರಿಷಿ ನಟನೆಯ ಹೊಸ ಚಿತ್ರ ‘ರುದ್ರ ಗರುಡ ಪುರಾಣ’

ಈ ಹಿಂದೆ “ಡಿಯರ್‌ ವಿಕ್ರಂ’ ಸಿನಿಮಾ ನಿರ್ದೇಶನ ಮಾಡಿದ್ದ ಕೆ.ಎಸ್‌. ನಂದೀಶ್‌ ಈ ಚಿತ್ರದ ನಿರ್ದೇಶಕರು. ಈ ಚಿತ್ರಕ್ಕೆ “ರುದ್ರ ಗರುಡ ಪುರಾಣ’ ಎಂದು ಟೈಟಲ್‌ ಇಡಲಾಗಿದೆ. ರಿಷಿ ನಟನೆಯ ಹೊಸ ಚಿತ್ರದ ಮುಹೂರ್ತ ಶುಕ್ರವಾರ ನಡೆದಿದೆ. ಚಿತ್ರದ ಬಗ್ಗೆ ಮಾತನಾಡುವ ರಿಷಿ, “ನನಗೆ ಒಂದೇ ಜಾನರ್‌, ಒಂದೇ ತೆರನಾದ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಇಷ್ಟವಿಲ್ಲ. ಆದರೆ, ಈ ಕಥೆ ಕೇಳಿದ ನಂತರ ಖುಷಿಯಿಂದ ಒಪ್ಪಿಕೊಂಡೆ. ನನ್ನ ಹಿಂದಿನ ಚಿತ್ರಗಳಿಗೆ ಈ ಚಿತ್ರಕ್ಕೂ ಯಾವುದೇ ಹೋಲಿಕೆ ಇಲ್ಲ. ಚಿತ್ರದಲ್ಲಿ […]