ಮೊರಾಕೊ ಭೂಕಂಪ: 2,000 ಕ್ಕೂ ಹೆಚ್ಚು ಜನ ಸಾವು; 3 ಲಕ್ಷ ಜನ ಬಾಧಿತ
ಶುಕ್ರವಾರ ತಡರಾತ್ರಿ ಮೊರಾಕೊದ ಅಟ್ಲಾಸ್ ಪರ್ವತ ಪ್ರದೇಶದಲ್ಲಿ ಪ್ರಬಲ ಭೂಕಂಪ ಸಂಭವಿಸಿದ ನಂತರ 2,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು ಹಲವಾರು ಕಟ್ಟಡಗಳು ಧರಾಶಾಯಿಯಾಗಿದ್ದು ಜನರು ತಮ್ಮ ಮನೆಗಳಿಂದ ಪಲಾಯನಗೈದಿದ್ದಾರೆ. ಸುಮಾರು 2,000 ಜನರು ಗಾಯಗೊಂಡಿದ್ದಾರೆ. ಮರಕೆಚ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ 3 ಲಕ್ಷಕ್ಕೂ ಹೆಚ್ಚು ಜನರು ಬಾಧಿತರಾಗಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮೊರಾಕೊಗೆ ಸಾಧ್ಯವಾದ ಎಲ್ಲಾ ನೆರವು ನೀಡುವ ಭರವಸೆ ನೀಡಿದ್ದಾರೆ. […]
ಮೊರಾಕೊದಲ್ಲಿ 6.8 ತೀವ್ರತೆಯ ಪ್ರಬಲ ಭೂಕಂಪ: 300 ಜನ ಸಾವನ್ನಪ್ಪಿರುವ ಅಂದಾಜು
ಶುಕ್ರವಾರ ತಡರಾತ್ರಿ ಮೊರಾಕೊದಲ್ಲಿ 6.8 ತೀವ್ರತೆಯ ಪ್ರಬಲವಾದ ಅಪ್ಪಳಿಸಿದ ನಂತರ ಸುಮಾರು 300 ಜನರು ಸಾವನ್ನಪ್ಪಿದ್ದಾರೆ ಎಂದು ದೇಶದ ಆಂತರಿಕ ಸಚಿವಾಲಯ ತಿಳಿಸಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಅಲ್ ಜಜೀರಾ ಸುದ್ದಿ ಸಂಸ್ಥೆಯ ಪ್ರಕಾರ, ಭೂಕಂಪದ ಕೇಂದ್ರವು ಮರ್ರೆಕೇಶ್‌ನ ಪಶ್ಚಿಮಕ್ಕೆ 72 ಕಿಲೋಮೀಟರ್ ದೂರದಲ್ಲಿದ್ದು, ಇದು ಇಲ್ಲಿನ ಪ್ರಮುಖ ಆರ್ಥಿಕ ಕೇಂದ್ರವಾಗಿದೆ. UNESCO ವಿಶ್ವ ಪರಂಪರೆಯ ತಾಣವಾಗಿರುವ ಹಳೆಯ ನಗರವನ್ನು ಸುತ್ತುವರೆದಿರುವ ಕೆಂಪು ಗೋಡೆಗಳು ಸಹ ಹಾನಿಗೊಳಗಾಗಿವೆ. #WATCH : Moment of […]