ಆಳ್ವಾಸ್ (ಸ್ವಾಯತ್ತ) ಕಾಲೇಜಿನಲ್ಲಿ ಗ್ರಂಥಪಾಲಕರ ದಿನಾಚರಣೆ

ಮೂಡುಬಿದಿರೆ: ಸಂಗ್ರಹಿಸಿದ ವಸ್ತುಗಳನ್ನು ಕೊಡುಗೆ ನೀಡುವುದು ಅಂತಕರಣದಿಂದ ಮಾಡುವ ದಾನ. ಸಂಗ್ರಹ ಹಾಗೂ ದಾನದ ಹಿಂದಿನ ಮೌಲ್ಯ ಮಹತ್ತರ’ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದರು. ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಗುರುವಾರ ಗ್ರಂಥಾಲಯ ವಿಭಾಗವು ಹಮ್ಮಿಕೊಂಡ ಗ್ರಂಥಪಾಲಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಮೆಸಪಟೋಮಿಯದಲ್ಲಿ ಮೊದಲ ಗ್ರಂಥಾಲಯ ಸ್ಥಾಪನೆಯಾಯಿತು ಎಂದು ಇತಿಹಾಸ ತಿಳಿಸಿದ ಅವರು, ದೇವಸ್ಥಾನ ಕಟ್ಟಿದರೆ ಭಿಕ್ಷುಕರು ಹೆಚ್ಚಾಗುತ್ತಾರೆ. ಆದರೆ, ಗ್ರಂಥಾಲಯ ಕಟ್ಟಿದರೆ ವಿದ್ವಾಂಸರು ಹುಟ್ಟುತ್ತಾರೆ ಎಂದು ಡಾ.ಬಿ.ಆರ್. […]