ಮೂಡುಬಿದಿರೆ:ಆಳ್ವಾಸ್ ಇಂಗ್ಲಿಷ್ ಮತ್ತು ಕನ್ನಡ ಮಾಧ್ಯಮ ಶಾಲೆಗಳ ವಾರ್ಷಿಕೋತ್ಸವ ಸಮಾರಂಭ

ವಿದ್ಯಾಗಿರಿ: ‘ಸರ್ಟಿಫಿಕೆಟ್‌ಗಿಂತ ಸಂಸ್ಕಾರ ಮುಖ್ಯ. ಶಿಕ್ಷಣವು ಸಂಸ್ಕಾರಭರಿತ ಮನಸ್ಸನ್ನು ಕಟ್ಟುವ ಪ್ರಕ್ರಿಯೆ ಎಂದು ಮಂಗಳೂರು ವಿಶ್ವವಿದ್ಯಾಲಯದ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಡಾ.ಧನಂಜಯ ಕುಂಬ್ಳೆ ಹೇಳಿದರು. ಆಳ್ವಾಸ್ ಮುಂಡ್ರೆದೆಗುತ್ತು ಕೆ ಅಮರನಾಥ ಶೆಟ್ಟಿ ಕೃಷಿಸಿರಿ ವೇದಿಕೆಯಲ್ಲಿ ಗುರುವಾರ ನಡೆದ ಆಳ್ವಾಸ್ ಇಂಗ್ಲಿಷ್ ಮಾಧ್ಯಮ ಮತ್ತು ಕನ್ನಡ ಮಾಧ್ಯಮ ಶಾಲೆಗಳ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. ವಿದ್ಯಾವಂತರಾದವರೇ ಸಮಾಜಘಾತುಕ ಕಾರ್ಯಗಳಲ್ಲಿ ತೊಡಗಿಕೊಂಡರೆ ಅಂತಹ ವಿದ್ಯೆಗೆ ಏನು ಬೆಲೆ? ಮಾನವೀಯ ಸಂವೇದನೆಯನ್ನುAಟು ಮಾಡುವ ಶಿಕ್ಷಣ ನಮಗೆ ಬೇಕಾಗಿದೆ. […]