ಮೂಡುಬಿದಿರೆ:ಭಾರತೀಯ ಜ್ಞಾನ ಪರಂಪರೆಯಲ್ಲಿ ವೈಜ್ಞಾನಿಕ ದೃಷ್ಟಿಕೋನ ಅಗತ್ಯ: ಡಾ. ಶರತ್ ಅನಂತಮೂರ್ತಿ

ಮೂಡುಬಿದಿರೆ: ಭಾರತದಲ್ಲಿ STEM ಶಿಕ್ಷಣ ಮತ್ತು ವೈಜ್ಞಾನಿಕ ಚಿಂತನೆಯ ಕುರಿತು ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದ ಚಿಂತನ – ಮಂಥನ ಓದುಗರ ವೇದಿಕೆಯು ಅತಿಥಿ ಉಪನ್ಯಾಸ ಹಮ್ಮಿಕೊಳ್ಳಲಾಗಿತ್ತು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಕುಲಪತಿ ಹಾಗೂ ಪ್ರಖ್ಯಾತ ಭೌತಶಾಸ್ತ್ರಜ್ಞರಾದ ಡಾ. ಶರತ್ ಅನಂತಮೂರ್ತಿ “ಭಾರತದಲ್ಲಿ STEM (ಸೈನ್ಸ್, ತಂತ್ರಜ್ಞಾನ, ಎಂಜಿನಿಯರಿAಗ್, ಗಣಿತ) ಶಿಕ್ಷಣದ ಸ್ಥಿತಿಗತಿಗಳು ಮತ್ತು ವಿಜ್ಞಾನ ಚಿಂತನೆಯ ಇತಿಹಾಸದ ಕುರಿತು ಮಾತನಾಡಿದರು. ಭಾರತೀಯ ಜಿಡಿಪಿಯ ಶೇ.0.3 ರಷ್ಟು ಮಾತ್ರ ಸಂಶೋಧನೆಗೆ ಖರ್ಚು ಮಾಡಲಾಗುತ್ತಿದೆ ಎಂಬುದರ ಕುರಿತು ಆತಂಕ ವ್ಯಕ್ತಪಡಿಸಿದ […]