ಮೂಡುಬಿದಿರೆ: ಯಕ್ಷ ಆರಾಧನಾ ಕಿದಿಯೂರು ಟ್ರಸ್ಟ್ ನ ಚೊಚ್ಚಲ ಕಾರ್ಯಕ್ರಮ
ಮೂಡುಬಿದಿರೆ: ಕಳೆದ ನಾಲ್ಕು ದಶಕಗಳಿಂದ ಯಕ್ಷಗಾನ ರಂಗದಲ್ಲಿ ಸಕ್ರೀಯರಾಗಿರುವ ಕಿದಿಯೂರಿನ ಭಾಗವತ ಕೆ.ಜೆ.ಗಣೇಶ್ ನೇತೃತ್ವದಲ್ಲಿ ಇತ್ತೀಚಿಗೆ ಯಕ್ಷ ಆರಾಧನಾ ಕಿದಿಯೂರು ಟ್ರಸ್ಟ್ ನ ಕಲಾವಿದರು ಮೂಡುಬಿದಿರೆ ಅಲಂಗಾರು ಇಂದಿರಾ ಪಾಲ್ಕೆ ಸಭಾಭವನದಲ್ಲಿ ಚೊಚ್ಚಲ ಕಾರ್ಯಕ್ರಮ ‘ಗಾನವೈಭವ’ ಪ್ರಸ್ತುತಪಡಿಸಿದರು. ಭಾಗವತರಾಗಿ ಕೆ.ಜೆ.ಗಣೇಶ್ ಹಾಗು ಅವರ ಪುತ್ರ ದೀಪ್ತ ಕಿದಿಯೂರು, ಮದ್ದಳೆವಾದಕರಾಗಿ ಕೆ.ಜೆ.ಸುಧೀಂದ್ರ, ಅರವಿಂದ, ಚೆಂಡೆವಾದಕರಾಗಿ ಕೆ.ಜೆ.ಕೃಷ್ಣ ಮತ್ತು ಅವರ ಪುತ್ರ ಪ್ರಣೀತ್ ಕಿದಿಯೂರು ಪಾಲ್ಗೊಂಡರು. ಗಣ್ಯರಾದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ರಾಜಶ್ರೀ […]