ಮೂಡುಬಿದಿರೆ: ಗೋಕಳ್ಳರ ಮೇಲೆ ಪೊಲೀಸರಿಂದ ಶೂಟೌಟ್; ಆರು ಜಾನುವಾರುಗಳ ವಶ
ಮೂಡುಬಿದಿರೆ: ಅಕ್ರಮವಾಗಿ ಜಾನುವಾರುಗಳನ್ನು ತುಂಬಿಸಿಕೊಂಡು ಸಾಗಿಸುತ್ತಿದ್ದ ಕಾರೊಂದನ್ನು ಪೊಲೀಸರು ಹಿಂಬಾಲಿಸಿಕೊಂಡು ಹೋಗಿ ಗಾಳಿಯಲ್ಲಿ ಗುಂಡು ಹಾರಿಸಿ ಹಿಡಿದ ಘಟನೆ ಮೂಡುಬಿದಿರೆ ಶಿರ್ತಾಡಿಯ ಓದಾಲ್ ಎಂಬಲ್ಲಿ ಇಂದು ಮುಂಜಾನೆ ನಡೆದಿದೆ. ಪೊಲೀಸರ ಗುಂಡಿನ ಸದ್ದಿಗೆ ಬೆದರಿದ ಆರೋಪಿಗಳು ಕಾರನ್ನು ರಸ್ತೆಯಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಪೊಲೀಸರು ರಿಡ್ಜ್ ಕಾರು ಮತ್ತು ಅದರೊಳಗೆ ಹಿಂಸಾತ್ಮಕ ರೀತಿಯಲ್ಲಿ ತುಂಬಿದ್ದ ಆರು ಜಾನುವಾರುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಶಿರ್ತಾಡಿಯಿಂದ ಓದಾಲ್ ಕಡೆಗೆ ಅಕ್ರಮವಾಗಿ ಗೋ ಸಾಗಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ತಿಳಿದ ತಕ್ಷಣ ಸರ್ಕಲ್ ಇನ್ […]