ಮೂಡುಬಿದಿರೆ: ಗೂಡ್ಸ್ ಲಾರಿ- ಬೈಕ್ ಡಿಕ್ಕಿ; ಮಾಜಿ ತಾಪಂ ಸದಸ್ಯೆಯ ಪುತ್ರ ಮೃತ್ಯು
ಮೂಡುಬಿದಿರೆ: ಗೂಡ್ಸ್ ಲಾರಿ ಮತ್ತು ಬೈಕ್ ಮಧ್ಯೆ ನಡೆದ ಭೀಕರ ಅಪಘಾತದಲ್ಲಿ ಬೈಕ್ ಸವಾರ ದಾರುಣವಾಗಿ ಮತಪಟ್ಟ ಘಟನೆ ಮೂಡುಬಿದಿರೆ ಸಮೀಪದ ಶಿರ್ತಾಡಿ ಎಂಬಲ್ಲಿ ಇಂದು ಸಂಭವಿಸಿದೆ. ಮೃತ ಬೈಕ್ ಸವಾರನನ್ನು ಉಜಿರೆಯ ನೇಕಾರ ಪೇಟೆಯ ನಿವಾಸಿ ಲಾಯಿಲ ತಾಪಂ ಮಾಜಿ ಸದಸ್ಯೆ ಶೋಭಾ ಶೆಟ್ಟಿ ಅವರ ದ್ವೀತಿಯ ಪುತ್ರ ಭವಿತ್ ಶೆಟ್ಟಿ (33) ಎಂದು ಗುರುತಿಸಲಾಗಿದೆ. ಇವರು ಅಮೆಜಾನ್ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದು, ಪಾರ್ಸೆಲ್ ಡೆಲಿವರಿ ಕೊಟ್ಟು ವಾಪಾಸ್ಸಾಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಅಪಘಾತದಲ್ಲಿ ಭವಿತ್ […]