ಮುಂಗಾರು ಋತುವಿನ ಎಫೆಕ್ಟು: ಕರಾವಳಿಯಲ್ಲಿ ಮೀನಿನ ದರ ದುಪ್ಪಟ್ಟು!!

ಮಂಗಳೂರು: ಕರಾವಳಿಯಲ್ಲಿ ಮುಂಗಾರು ಮಳೆಯ ಲಕ್ಷಣಗಳು ಕಾಣಿಸಿಕೊಂಡಿರುವುದರಿಂದ ಹಾಗೂ ಎರಡು ತಿಂಗಳುಗಳವರೆಗೆ ಮೀನುಗಾರಿಕೆಗೆ ನಿಷೇಧ ಹೇರಿರುವುದರಿಂದ ನಿರೀಕ್ಷೆಯಂತೆಯೆ ಮೀನಿನ ದರ ದುಪ್ಪಟ್ಟಾಗಿದೆ. ನಗರದ ಕೆಎಫ್‌ಡಿಸಿ ಯಲ್ಲಿ ಒಂದು ಕೆಜಿ ಬೊಳೆಂಜಿರ್ 1,600 ರೂ, ಅಂಜಲ್ ಮೀನು ಪ್ರತಿ ಕೆಜಿಗೆ 1300 ರೂಗೆ ಮಾರಾಟವಾಗಿದೆ. ಕೇವಲ 12 ದಿನಗಳ ಹಿಂದೆ ಈ ಮೀನುಗಳ ದರ ಈಗಿನ ದರದ ಅರ್ಧದಷ್ಟಿತ್ತು. ದೊಡ್ಡ ಸಿಗಡಿ ಕೆಜಿಗೆ 475 ರೂ ಹಾಗೂ ಬೂತಾಯಿ-ಬಂಗುಡೆ ಮೀನುಗಳು ಕ್ರಮವಾಗಿ ಪ್ರತಿ ಕೆಜಿಗೆ 250 ರೂ ಮತ್ತು […]

ಮಳೆಗಾಲದ ತುರ್ತು ಸಂದರ್ಭಕ್ಕಾಗಿ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆಗಳು ಇಂತಿವೆ

ಉಡುಪಿ: ಜಿಲ್ಲೆಯಲ್ಲಿ ಮಳೆಗಾಲದ ಸಂದರ್ಭದಲ್ಲಿ ವಿಪತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿ, ತಾಲೂಕು ಮಟ್ಟ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಂಟ್ರೋಲ್ ರೂಂ ಅನ್ನು ಸ್ಥಾಪಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಉಡುಪಿ ತಹಶೀಲ್ದಾರರ ಕಚೇರಿ ಕಂಟ್ರೋಲ್ ರೂಂ ನಂ: 0820-2520417, ಬ್ರಹ್ಮಾವರ ತಹಶೀಲ್ದಾರರ ಕಚೇರಿ ಕಂಟ್ರೋಲ್ ರೂಂ ನಂ: 0820-2560494, ಕಾಪು ತಹಶೀಲ್ದಾರರ ಕಚೇರಿ ಕಂಟ್ರೋಲ್ ರೂಂ ನಂ: 0820-2551444, ಕುಂದಾಪುರ ತಹಶೀಲ್ದಾರರ ಕಚೇರಿ ಕಂಟ್ರೋಲ್ ರೂಂ ನಂ: 08254-230357, ಬೈಂದೂರು ತಹಶೀಲ್ದಾರರ ಕಚೇರಿ ಕಂಟ್ರೋಲ್ […]

ಮುಂಗಾರು ಪೂರ್ವ ತಯಾರಿ: ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಶಾಸಕ ಯಶ್ ಪಾಲ್ ಸುವರ್ಣ

ಉಡುಪಿ: ಮುಂಗಾರು ಪ್ರವೇಶ ಹಾಗೂ 2023-24 ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭಗೊಂಡಿದ್ದು, ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳಿಗೆ ತೆರೆಯಲು ಸೂಕ್ತ ಸಾರಿಗೆ ವ್ಯವಸ್ಥೆ ದೃಷ್ಟಿಯಿಂದ ಸ್ಥಗಿತಗೊಂಡಿರುವ ಮಾರ್ಗಗಳಲ್ಲಿ ಕೆಎಸ್‌ಆರ್‌ಟಿಸಿ ನರ್ಮ್ ಬಸ್‌ಗಳನ್ನು ಓಡಿಸಬೇಕು. ನಗರಸಭೆಯ 35 ವಾರ್ಡ್‌ಗಳಲ್ಲಿ ಬಸ್ ಗಳ ಅಗತ್ಯವಿರುವ ಮಾರ್ಗಗಳನ್ನು ಪಟ್ಟಿ ಮಾಡಿ ಹೆಚ್ಚುವರಿ ಬಸ್ ಸಂಚಾರ ಕಲ್ಪಿಸುವಂತೆ ಶಾಸಕ ಯಶಪಾಲ್ ಎ. ಸುವರ್ಣ ಸೂಚಿಸಿದ್ದಾರೆ. ಅವರು ಉಡುಪಿ ನಗರಸಭೆಯ ಸತ್ಯಮೂರ್ತಿ ಸ್ಮಾರಕ ಸಭಾಂಗಣದಲ್ಲಿ ಮಳೆಗಾಲದ ಪೂರ್ವ ಸಿದ್ಧತೆ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ […]

ಕೇರಳಕ್ಕೆ ಮುಂಚಿತವಾಗಿ ಆಗಮಿಸಿದ ಮಾನ್ಸೂನ್: ಜೂನ್ 2 ರೊಳಗೆ ಕರ್ನಾಟಕಕ್ಕೆ ಮುಂಗಾರು ಮಳೆಯ ಸಿಂಚನ

ಬೆಂಗಳೂರು: ನೈಋತ್ಯ ಮಾನ್ಸೂನ್ ನಿಗದಿತ ಸಮಯಕ್ಕಿಂತ ಮೂರು ದಿನಗಳ ಮುಂಚಿತವಾಗಿ ಭಾನುವಾರವೆ ಕೇರಳಕ್ಕೆ ಆಗಮಿಸಿದ್ದು, ಜೂನ್ 2 ರ ವೇಳೆಗೆ ಕರ್ನಾಟಕಕ್ಕೆ ಆಗಮಿಸುವ ನಿರೀಕ್ಷೆಯಿದೆ. ಇದು ನಾಲ್ಕು ತಿಂಗಳ ಅವಧಿಯ ಸಾಮಾನ್ಯ ಮಳೆಗಾಲದ ಮುನ್ಸೂಚನೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಕೇರಳ, ತಮಿಳುನಾಡು, ಉಪ-ಹಿಮಾಲಯ ಪಶ್ಚಿಮ ಬಂಗಾಳ ಮತ್ತು ಬಿಹಾರದಲ್ಲಿ ಭಾರೀ ಮಳೆ ಸಂಭವಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ಭಾನುವಾರ ಬೆಳಿಗ್ಗೆ 8.30 ಕ್ಕೆ ದಾಖಲಿಸಿದ ಮಾಹಿತಿಯು ತೋರಿಸಿದೆ. ಕೇರಳದ 14 ಹವಾಮಾನ ಕೇಂದ್ರಗಳಲ್ಲಿ […]

ಹವಾಮಾನ ವೈಪರೀತ್ಯ: ಪ್ರತಿದಿನದ ಮಾಹಿತಿಗಾಗಿ ವೆಬ್ಸೈಟ್ ನೋಡಿ

ಉಡುಪಿ: ಪೂರ್ವ ಮಾನ್ಸೂನ್ ಮಳೆಯು ಈಗಾಗಲೇ ಪ್ರಾರಂಭವಾಗಿದ್ದು, ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿಗಳಲ್ಲಿ ಈ ಅವಧಿಯಲ್ಲಿ ಚಂಡಮಾರುತಗಳು ಬೀಸುವ ಸಾಧ್ಯತೆ ಇದ್ದು, ಈ ಸಂದರ್ಭದಲ್ಲಿ ಅತಿಯಾದ ಮಳೆ ಹಾಗೂ ಜೋರಾದ ಗಾಳಿ ಭೂಮಿಯ ಕಡೆಗೆ ಬೀಸುವ ಸಾಧ್ಯತೆಗಳಿವೆ. ಈ ಬಗ್ಗೆ ಪ್ರತಿದಿನದ ಮುನ್ಸೂಚನೆಯ ಮಾಹಿತಿಗಳನ್ನು mausam.imd.gov.in/bengaluru ನಲ್ಲಿ ಪಡೆಯಬಹುದಾಗಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಪ್ರಕಟಣೆ ತಿಳಿಸಿದೆ.