ಸಾಲ ವಾಪಸು ಕೇಳಿದ್ದಕ್ಕೆ ಕೊಲೆ ಬೆದರಿಕೆ

ಉಡುಪಿ: ವ್ಯವಹಾರಕ್ಕೆ ನೀಡಿರುವ ಸಾಲವನ್ನು ವಾಪಸು ಕೇಳಿದ್ದಕ್ಕೆ ವ್ಯಕ್ತಿಗೆ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಹಾಕಿರುವ ಘಟನೆ ಉಡುಪಿ ತಾಲೂಕಿನ ಬ್ರಹ್ಮಗಿರಿಯಲ್ಲಿ ನಡೆದಿದೆ. ಈ ಬಗ್ಗೆ ಬ್ರಹ್ಮಗಿರಿ ನಾಯರ್‌ಕೆರೆ ನಿವಾಸಿ 70 ವರ್ಷದ ಪ್ರೇಮಾನಂದ ಶೆಟ್ಟಿ ಪೊಲೀಸರಿಗೆ ದೂರು ನೀಡಿದ್ದಾರೆ. ಇವವರಿಗೆ ಪರಿಚಯಸ್ಥನಾಗಿದ್ದ ಸ್ಯಾಮುವೆಲ್ ರಿಜೋಯ್ ಆನಂದ ಯಾನೆ ಸ್ಯಾಮುವೆಲ್ ಡಿ’ಸೋಜ ವಂಚನೆ ಎಸಗಿರುವ ಆರೋಪಿ. ಪ್ರೇಮಾನಂದ ಅವರು 2019ರಲ್ಲಿ ಆರೋಪಿಗೆ ವ್ಯವಹಾರದ ಉದ್ದೇಶಕ್ಕೆ 3.50 ಲಕ್ಷ ರೂ. ಹಣವನ್ನು ಸಾಲದ ರೂಪದಲ್ಲಿ ಕೊಟ್ಟಿದ್ದರು. ಹಣವನ್ನು […]
ಅಧಿಕ ಮೊತ್ತದ ನಗದು ವಶ: ಅಪೀಲಿಗೆ ಸಮಿತಿ

ಉಡುಪಿ: ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ರೂ. 50,000/- ಕ್ಕಿಂತ ಜಾಸ್ತಿ ಮೊತ್ತದ ನಗದನ್ನು ಯಾವುದೇ ದಾಖಲಾತಿ ಇಲ್ಲದೇ ಕೊಂಡೊಯ್ಯುವುದು ಕಂಡು ಬಂದಲ್ಲಿ ಚುನಾವಣಾ ನೀತಿ ಸಂಹಿತೆ ಅನುಷ್ಠಾನ ನಿರತ ಸರ್ಕಾರಿ ಸಿಬ್ಬಂದಿಗಳು ನಿಯಮಾನುಸಾರ ನಗದು ವಶಪಡಿಸಿ ಖಜಾನೆಗೆ ಜಮಾ ಮಾಡಿ ರಶೀದಿ ನೀಡುವರು. ಈ ಸಂದರ್ಭದಲ್ಲಿ ಬಾಧಿತ ವ್ಯಕ್ತಿಗಳು ಸೂಕ್ತ ದಾಖಲಾತಿಗಳೊಂದಿಗೆ (ಆಧಾರ್ ಕಾರ್ಡ್ ಪ್ರತಿ, ಎಟಿಎಂ ಸ್ಲಿಪ್, ಬ್ಯಾಂಕ್ ಪಾಸ್ ಬುಕ್‍ನ ಪ್ರತಿ ಸೇರಿದಂತೆ ಇತರ ವ್ಯವಹಾರದ ಮಾಹಿತಿ ) ಮುಖ್ಯ ಕಾರ್ಯ […]