ಮೊಬೈಲ್ ಸಂದೇಶ ನಂಬಿ ಲಕ್ಷಾಂತರ ರೂ. ಕಳೆದುಕೊಂಡ ಬೆಳ್ಮಣ್ ಯುವಕ
ಉಡುಪಿ: ಸುಳ್ಳು ಮೊಬೈಲ್ ಸಂದೇಶವನ್ನು ನಂಬಿ ಯುವಕನೊಬ್ಬ ಲಕ್ಷಾಂತರ ರೂಪಾಯಿ ಕಳೆದಕೊಂಡ ಘಟನೆ ಬೆಳ್ಮಣ್ ನಲ್ಲಿ ನಡೆದಿದೆ. ಬೆಳ್ಮಣ್ ಪುನಾರ್ ನಿವಾಸಿ ಸುರೇಶ್ ಪ್ರಭು ಎಂಬವರ ಮಗ ಸುಜಿತ್ ಪ್ರಭು (19) ವಂಚನೆ ಒಳಗಾಗಿ ಹಣ ಕಳೆದುಕೊಂಡವರು. ಈತನ ಮೊಬೈಲ್‌ಗೆ ಸೆ.4ರಂದು 12,18,095ರೂ. ಲಾಟರಿ ಗೆದ್ದಿರುವುದಾಗಿ ಸಂದೇಶ ಬಂದಿತ್ತು. ಬಳಿಕ ವ್ಯಕ್ತಿಯೊಬ್ಬ ಕರೆ ಮಾಡಿ, ಲಾಟರಿಯಲ್ಲಿ ಗೆದ್ದ 17,400 ಡಾಲರ್ ಹಣವನ್ನು ರೂಪಾಯಿಗೆ ವರ್ಗಾವಣೆ ಮಾಡಲು 6,500ರೂ. ಪಾವತಿಸಬೇಕು ಎಂದು ನಂಬಿಸಿದ್ದನು. ಸುಜಿತ್ ಪ್ರಭು ಹಣವನ್ನು ಅವರ […]