ಅನಾಥ ಪ್ರಾಣಿಗಳ ಕಳೇಬರ ವಿಲೇವಾರಿಗೆ ಮೊಬೈಲ್ ಚಿತಾಗಾರದ ವ್ಯವಸ್ಥೆ: ಜಿಲ್ಲಾಧಿಕಾರಿ ಕೂರ್ಮಾರಾವ್
ಉಡುಪಿ: ಜಿಲ್ಲೆಯಲ್ಲಿ ಸಾವಿಗೀಡಾಗುವ ಅನಾಥ ಪ್ರಾಣಿಗಳ ಕಳೇಬರವನ್ನು ಪರಿಸರ ಸ್ವೀಕಾರ್ಹವಾಗಿ ವಿಲೇವಾರಿ ಮಾಡಲು ಮೊಬೈಲ್ ಚಿತಾಗಾರ ವ್ಯವಸ್ಥೆಗಳನ್ನು ಮಾಡುವಂತೆ ಪಶುಪಾಲನಾ ಇಲಾಖಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೂರ್ಮರಾವ್ ಎಂ ನಿರ್ದೇಶನ ನೀಡಿದರು. ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಾಣಿ ದಯಾ ಸಂಘದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಮತ್ತು ರಸ್ತೆ ಬದಿಯಲ್ಲಿ ಅಪಘಾತಕ್ಕೀಡಾಗಿ ಮತ್ತು ಇತರೆ ಕಾರಣಗಳಿಂದಾಗಿ ಸಾವಿಗೀಡಾಗುವ ಪ್ರಾಣಿಗಳ ಕಳೇಬರಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ವಿಲೇವಾರಿ ಮಾಡಲು ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗುತ್ತಿದೆ ಎಂಬ […]