ಮಂಗಳೂರು ಎಂಸಿಸಿ ಬ್ಯಾಂಕ್ ಶತಮಾನೋತ್ತರ ದಶಮಾನೋತ್ಸವ: ಅಶಕ್ತ ಕುಟುಂಬಗಳಿಗೆ 15 ಲಕ್ಷ ಮೊತ್ತ ದೇಣಿಗೆ
ಮಂಗಳೂರು: ಕರಾವಳಿಯ ಮುಂಚೂಣಿ ಸಹಕಾರಿ ಲಿಮಿಟೆಡ್ ಬ್ಯಾಂಕ್ ಗಳಲ್ಲಿ ಒಂದಾದ ಎಂಸಿಸಿ ಬ್ಯಾಂಕ್ ಮಂಗಳೂರು ಇದರ ಶತಮಾನೋತ್ತರ ದಶಮಾನೋತ್ಸವದ ಪ್ರಯುಕ್ತ ಸಮಾಜದ ಅಶಕ್ತ ವರ್ಗದವರ ಚಿಕಿತ್ಸೆ, ಉನ್ನತ ಶಿಕ್ಷಣ, ವಸತಿ ಮತ್ತು ಹೆಣ್ಣು ಮಕ್ಕಳ ಮದುವೆ ವೆಚ್ಚ ಸೇರಿದಂತೆ ಸರಿಸುಮಾರು 90 ಅಶಕ್ತ ಕುಟುಂಬಗಳಿಗೆ 15 ಲಕ್ಷ ಮೊತ್ತದ ದತ್ತಿ ದೇಣಿಗೆ ವಿತರಣಾ ಕಾರ್ಯಕ್ರಮ ಮಂಗಳೂರಿನ ಬಾವುಟಗುಡ್ಡೆಯಲ್ಲಿರುವ ಎಂಸಿಸಿ ಬ್ಯಾಂಕ್ ನ ಪ್ರಧಾನ ಕಚೇರಿಯ ಸಭಾಂಗಣದಲ್ಲಿ ನೆರವೇರಿತು. ಜೆಪ್ಪು ಸೆಮಿನರಿಯ ಆಡಳಿತಾಧಿಕಾರಿ, ಪ್ರೊಫೆಸರ್ ಫಾ. ನವೀನ್ ಪಿಂಟೊ ದೀಪಬೆಳಗಿ […]
ಮಂಗಳೂರು: ಜೂ.27 ರಂದು ಖಾಸಗಿ ಕಂಪೆನಿಗಳಿಂದ ನೇರ ಸಂದರ್ಶನ
ಮಂಗಳೂರು: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಖಾಸಗಿ ಕಂಪೆನಿಗಳ ನೇರ ಸಂದರ್ಶನವನ್ನು ಇದೇ ಜೂ.27ರ ಸೋಮವಾರ ಹಮ್ಮಿಕೊಳ್ಳಲಾಗಿದೆ. ಎಸ್.ಎಸ್.ಎಲ್.ಸಿ, ಪಿಯುಸಿ, ಐಟಿಐ, ಡಿಪ್ಲೋಮಾ ಹಾಗೂ ಯಾವುದೇ ಪದವಿ ತೇರ್ಗಡೆಯಾದ ಆಸಕ್ತ ಅಭ್ಯರ್ಥಿಗಳು ಸ್ವ ವಿವರದ ಬಯೋಡೇಟಾದೊಂದಿಗೆ ನಗರದ ಮಂಗಳೂರು ಮಹಾನಗರ ಪಾಲಿಕೆ ಕಟ್ಟಡದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಬೆಳಿಗ್ಗೆ 10 ಗಂಟೆಯಿಂದ ಹಮ್ಮಿಕೊಂಡಿರುವ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು.