ಮಣಿಪಾಲ: ಎಂಐಟಿ ವತಿಯಿಂದ ಅಕ್ಷಯ ಉರ್ಜಾ ದಿವಸ್ ಕಾರ್ಯಾಗಾರ
ಮಣಿಪಾಲ: ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವತಿಯಿಂದ (ಎಂ.ಐ.ಟಿ) ಆಗಸ್ಟ್ 20 ರಂದು ಅಕ್ಷಯ ಉರ್ಜಾ ದಿವಸ್ ಅನ್ನು ಆಚರಿಸಲಾಯಿತು. ಉಡುಪಿ ಮತ್ತು ಬ್ರಹ್ಮಾವರದ ಸರ್ಕಾರಿ ಶಾಲೆಗಳ 400 ವಿದ್ಯಾರ್ಥಿಗಳಿಗೆ ಸೌರಶಕ್ತಿ ಮತ್ತು ಹವಾಮಾನ ಬದಲಾವಣೆಯ ಭೀಕರ ಪರಿಣಾಮಗಳ ಕುರಿತು ಕಾರ್ಯಾಗಾರದ ಮೂಲಕ ಅರಿವು ಮೂಡಿಸಲಾಯಿತು. ಕಾರ್ಯಾಗಾರದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಸೋಲಾರ್ ಲ್ಯಾಂಪ್‌ಗಳನ್ನು ಜೋಡಿಸಲು ತರಬೇತಿ ನೀಡಲಾಯಿತು. ಆ ಬಳಿಕ ಈ ಸೋಲಾರ್ ಲ್ಯಾಂಪ್‌ಗಳನ್ನು ಶಾಲಾ ಶಿಕ್ಷಕರ ಸಹಿತ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಸಾರ್ವಜನಿಕ ಶಿಕ್ಷಣ […]