ಬಿಜೆಪಿ ಒಬಿಸಿ ಮೋರ್ಚಾ: ನಾಳೆ (ಸೆ.22) ಸಚಿವರಿಗೆ ಸನ್ಮಾನ
ಬೆಂಗಳೂರು: ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಘಟಕದ ವತಿಯಿಂದ ರಾಜ್ಯದ ಬಿಜೆಪಿ ಸರಕಾರದಲ್ಲಿ ಒಬಿಸಿ ಸಮುದಾಯದಿಂದ ಸಚಿವರಾದ ಜನಪ್ರತಿನಿಧಿಗಳನ್ನು ನಗರದ ಮಲ್ಲೇಶ್ವರದ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಸೆ. 22ರಂದು ಸಂಜೆ 6 ಗಂಟೆಗೆ ಸನ್ಮಾನಿಸಲಾಗುವುದು ಎಂದು ಬಿಜೆಪಿ ಒ.ಬಿ.ಸಿ. ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಯಶ್‌ಪಾಲ್ ಎ. ಸುವರ್ಣ ಮತ್ತು ಒ.ಬಿ.ಸಿ. ಮೋರ್ಚಾ ರಾಜ್ಯ ಅಧ್ಯಕ್ಷರಾದ ನೆ.ಲ. ನರೇಂದ್ರಬಾಬು ಅವರು ತಿಳಿಸಿದ್ದಾರೆ. ರಾಜ್ಯದ ಸಚಿವರಾದ ಕೆ.ಎಸ್.ಈಶ್ವರಪ್ಪ, ಕೋಟ ಶ್ರೀನಿವಾಸ ಪೂಜಾರಿ, ಶ್ರೀ ಸುನೀಲ್ ಕುಮಾರ್, ಎಂ.ಟಿ.ಬಿ.ನಾಗರಾಜ್, ಭೈರತಿ […]