ಗ್ರಾಪಂ ಸದಸ್ಯರ ಗೌರವಧನ ಶೀಘ್ರವೇ ಹೆಚ್ಚಳ: ಸಚಿವ ಕೋಟ ಭರವಸೆ

ಬೆಂಗಳೂರು: ರಾಜ್ಯದ ಗ್ರಾಮ ಪಂಚಾಯಿತಿ ಸದಸ್ಯರ ಗೌರವಧನವನ್ನು ಹೆಚ್ಚಳ ಮಾಡಲಾಗುವುದು ಎಂದು ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ವಿಧಾನಪರಿಷತ್ ನಲ್ಲಿ ಮಾತನಾಡಿದ ಸಚಿವರು, ರಾಜ್ಯದ ಗ್ರಾಪಂ ಸದಸ್ಯರ ಗೌರವಧನವನ್ನು 2010, 2014 ಮತ್ತು 2017 ರಲ್ಲಿ ಪರಿಷ್ಕರಣೆ ಮಾಡಲಾಗಿದೆ. ಅಧ್ಯಕ್ಷರಿಗೆ 3 ಸಾವಿರ ರೂ. ಉಪಾಧ್ಯಕ್ಷರಿಗೆ 2 ಸಾವಿರ ರೂ. ಸದಸ್ಯರಿಗೆ ಒಂದು ಸಾವಿರ ರೂ. ಗೌರವಧನವಿದ್ದು, ದುಪ್ಪಟ್ಟಾದರೆ ಕ್ರಮವಾಗಿ 6 ಸಾವಿರ ರೂ. 4 ಸಾವಿರ ರೂ. 2 ಸಾವಿರ ರೂ.ಗೆ ಏರಿಕೆಯಾಗಲಿದೆ ಎಂದು ಮಾಹಿತಿ […]