ಕೇರಳದಲ್ಲಿ ತನ್ನ ವಿಸ್ತರಣೆಯನ್ನು ಸ್ಥಗಿತಗೊಳಿಸಿದ ಕರ್ನಾಟಕದ ನಂದಿನಿ; ಮಿಲ್ಮಾ ಹಾಲಿನ ಉತ್ಪನ್ನಗಳೇ ಸಾಕೆಂದ ನೆರೆರಾಜ್ಯ

ಬೆಂಗಳೂರು: ಇತ್ತೀಚೆಗೆ ಕೇರಳದಲ್ಲಿ ತನ್ನ ಕೆಲವು ಔಟ್‌ಲೆಟ್‌ಗಳನ್ನು ತೆರೆದಿರುವ ಕರ್ನಾಟಕದ ಜನಪ್ರಿಯ ಡೈರಿ ಬ್ರ್ಯಾಂಡ್ ನಂದಿನಿ, ರಾಜ್ಯದಲ್ಲಿ ತನ್ನ ವಿಸ್ತರಣೆ ಯೋಜನೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಕೇರಳದ ಪಶುಸಂಗೋಪನೆ, ಡೈರಿ ಅಭಿವೃದ್ಧಿ ಮತ್ತು ಸಹಕಾರಿಗಳ ಸಚಿವೆ ಜೆ ಚಿಂಚುರಾಣಿ, ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್) ಸಿಇಒ ಅವರಿಂದ ಈ ಬಗ್ಗೆ ಮಾಹಿತಿ ಪಡೆದಿದ್ದಾರೆ. ಕೆಎಂಎಫ್ ನಿರ್ಧಾರವನ್ನು ಸ್ವಾಗತಿಸಿದ ಚಿಂಚುರಾಣಿ, ಕಾಂಗ್ರೆಸ್ ಗೆಲುವಿನ ನಂತರ ಕರ್ನಾಟಕದಲ್ಲಿ ಸರ್ಕಾರ ಬದಲಾದ ಹಿನ್ನೆಲೆಯಲ್ಲಿ ಈ ಬದಲಾವಣೆಯಾಗಿದೆ ಎಂದು ಹೇಳಿರುವುದಾಗಿ ಹಿಂದುಸ್ಥಾನ್ ಟೈಮ್ಸ್ ವರದಿ […]