ಹಾಲಿನ ದರ ಏರಿಕೆ: ಮುಖ್ಯಮಂತ್ರಿ ಮಧ್ಯಪ್ರವೇಶ; ನ. 20 ರವರೆಗೆ ಕಾಯಲು ಕೆಎಂಎಫ್ ನಿರ್ಧಾರ
ಬೆಂಗಳೂರು: ಮಂಗಳವಾರದಿಂದ ಹಾಲು ಮತ್ತು ಮೊಸರು ದರವನ್ನು ಹೆಚ್ಚಿಸುವ ಕರ್ನಾಟಕ ಹಾಲು ಒಕ್ಕೂಟದ (ಕೆಎಂಎಫ್) ನಿರ್ಧಾರಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಾತ್ಕಾಲಿಕ ತಡೆ ಹಾಕಿದ್ದಾರೆ. ಮುಖ್ಯಮಂತ್ರಿ ನಿರ್ದೇಶನದ ನಂತರ, ಹಾಲು ಮತ್ತು ಮೊಸರಿನ ಬೆಲೆಗಳನ್ನು ಪರಿಷ್ಕರಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ನವೆಂಬರ್ 20 ರವರೆಗೆ ಕಾಯಲು ಕೆಎಂಎಫ್ ನಿರ್ಧರಿಸಿದೆ. ಸೋಮವಾರ ಮಧ್ಯರಾತ್ರಿಯೊಳಗೆ ಬೆಲೆ ಏರಿಕೆ ಮಾಡಲು ಕೆಎಂಎಫ್ ನಿರ್ಧರಿಸಿದ ಸುದ್ದಿ ತಿಳಿದ ಮುಖ್ಯಮಂತ್ರಿ ಬೊಮ್ಮಾಯಿ, ನವೆಂಬರ್ 20ರ ವರೆಗೆ ಬೆಲೆ ಏರಿಕೆ ಮಾಡದಂತೆ ಘಟಕವನ್ನು ಕೇಳಿಕೊಂಡಿದ್ದಾರೆ. ಕೆಎಂಎಫ್ […]