ಉಡುಪಿಗೆ ಭಾರತೀಯ ಜನತಾ ಪಕ್ಷದಲ್ಲಿ ವಿಶೇಷ ಸ್ಥಾನವಿದೆ: ಜೆ.ಪಿ.ನಡ್ಡಾ

ಉಡುಪಿ: ಜಿಲ್ಲೆಗೆ ಭೇಟಿ ನೀಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೋಮವಾರದಂದು ಉಡುಪಿಯ ಎಂಜಿಎಂ ಕಾಲೇಜು ಮೈದಾನದಲ್ಲಿ ಬೂತ್ ಅಧ್ಯಕ್ಷರು ಮತ್ತು ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ಪವಿತ್ರ ಕೃಷ್ಣಮಠಕ್ಕೆ ಭೇಟಿ ನೀಡಿ, ಶ್ರೀಕೃಷ್ಣನ ಆಶೀರ್ವಾದ ಪಡೆದು ಮಾತು ಆರಂಭಿಸುತ್ತಿದ್ದೇನೆ. ಉಡುಪಿಗೆ ಭಾರತೀಯ ಜನತಾ ಪಕ್ಷದಲ್ಲಿ ವಿಶೇಷ ಸ್ಥಾನವಿದೆ. 1968ರಲ್ಲಿ ಬಾರಿಗೆ ಉಡುಪಿ ನಗರಸಭೆ ಭಾರತೀಯ ಜನ ಸಂಘದ ತೆಕ್ಕೆಗೆ ಬಂದಿದ್ದು, ಈ ಮೂಲಕ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಕಮಲ ಅರಳಲು ಸಾಧ್ಯವಾಗಿತ್ತು.1968ರಲ್ಲಿ ವಿಎಸ್ ಆಚಾರ್ಯ […]

ಅಟಲ್ ಉತ್ಸವ: ಮುಂದಿನ ವಿಧಾನಸಭಾ ಚುನಾವಣೆಗೆ ಮುನ್ನುಡಿಯಾದ ಐತಿಹಾಸಿಕ ‘ಬೂತ್ ಸಂಗಮ’ ಕಾರ್ಯಕ್ರಮ

ಉಡುಪಿ: ಬಿಜೆಪಿಯ ವಿಧಾನಸಭಾ ಚುನಾವಣೆಯ ಮುನ್ನುಡಿಯಾಗಿ ನಗರದ ಎಂಜಿಎಂ ಕಾಲೇಜು ಮೈದಾನದಲ್ಲಿ ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವರ 98 ನೇ ಜನ್ಮದಿನದ ಅಂಗವಾಗಿ ಅಟಲ್ ಉತ್ಸವ ಆಯೋಜಿಸಲಾಗಿದ್ದು ಈ ಸಂದರ್ಭದಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಐತಿಹಾಸಿಕ ‘ಬೂತ್ ಸಂಗಮ’ ಕಾರ್ಯಕ್ರಮ ಭಾನುವಾರ ನಡೆಯಿತು. ಉಡುಪಿ ವಿಧಾನಸಭಾ ಕ್ಷೇತ್ರದ ‘ಬೂತ್ ಸಂಗಮ’ದಲ್ಲಿ ನಗರ ಮತ್ತು ಗ್ರಾಮಾಂತರ ಭಾಗದ 226 ಮತಗಟ್ಟೆಗಳಿಂದಲೂ ಕಾರ್ಯಕರ್ತರು ಭಾಗವಹಿಸಿ ಇತಿಹಾಸ ನಿರ್ಮಿಸಿದರು.   ಮುಂಬರುವ ವಿಧಾನಸಭೆಯಲ್ಲಿ ಪಕ್ಷ ಸಂಘಟನೆಯ ಬಗ್ಗೆ ಮಂಥನ ನಡೆಸಲಾಯಿತು. […]

ಹಿರಿಯರ ಅನುಭವಪೂರಿತ ಮಾರ್ಗದರ್ಶನದಿಂದ ಜಿಲ್ಲೆಯ ಅಭಿವೃದ್ದಿಯ ಸಂಕಲ್ಪ: ಶಾಸಕ ರಘುಪತಿ ಭಟ್

ಉಡುಪಿ: ಭಾರತೀಯ ಸಂಸ್ಕೃತಿಯಲ್ಲಿ ಯಾವುದೇ ಕಾರ್ಯವನ್ನು ಮಾಡುವಾಗ ಹಿರಿಯರ ಆಶೀರ್ವಾದ ಪಡೆಯುವ ಸಂಸ್ಕೃತಿ ಇದೆ. ಹಿರಿಯರ ಅನುಭವಗಳು ಮುಂದಿನ ಪೀಳಿಗೆಗೆ ದಾರಿದೀಪವಿದ್ದಂತೆ. ಪ್ರಸ್ತುತ ಉಡುಪಿ ಜಿಲ್ಲಾ ರಜತ ಉತ್ಸವ ಕಾರ್ಯಕ್ರಮಗಳು ನಡೆಯುತ್ತಿದ್ದು, ಜಿಲ್ಲೆಯಲ್ಲಿನ ಹಿರಿಯ ನಾಗರೀಕರ ಸಂಘಟನೆಗಳು ಅತ್ಯಂತ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲೆಯ ಮುಂದಿನ ಅಭಿವೃದ್ಧಿಯ ಕುರಿತು ಜಿಲ್ಲೆಯ ಹಿರಿಯ ನಾಗರೀಕರು ತಮ್ಮ ಸಲಹೆ, ಅನುಭವಪೂರಿತ ಮಾರ್ಗದರ್ಶನಗಳನ್ನು ಜಿಲ್ಲಾಡಳಿತಕ್ಕೆ ನೀಡುವಂತೆ ಶಾಸಕ ಕೆ. ರಘುಪತಿ ಭಟ್ ಹೇಳಿದರು. ಅವರು ಶನಿವಾರದಂದು ಕುಂಜಿಬೆಟ್ಟು ಎಂ.ಜಿ.ಎಂ ಕಾಲೇಜಿನ ರವೀಂದ್ರ ಕಲಾ […]

ರೋಟರಿ ಮಣಿಪಾಲ: 22-23ನೇ ವರ್ಷದ ಹೊಸ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಮಣಿಪಾಲ: ರೋಟರಿ ಮಣಿಪಾಲದ 22-23ನೇ ವರ್ಷದ ಹೊಸ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜುಲೈ 09, ಶನಿವಾರದಂದು ಸಂಜೆ 6 ಗಂಟೆಗೆ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ. ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಅಧ್ಯಕ್ಷೆ ರೇಣು ಜಯರಾಮ್, ಕಾರ್ಯದರ್ಶಿ ಶಶಿಕಲಾ ರಾಜವರ್ಮ ಮತ್ತು ಆರ್.ಸಿ.ಎಮ್ ತಂಡವು ತಿಳಿಸಿದೆ.

ಮಣಿಪಾಲ ಟೌನ್‌ ರೋಟರಿ ಕ್ಲಬ್ ನ ಪದಗ್ರಹಣ ಕಾರ್ಯಕ್ರಮ: ರೋಟರಿ ಕ್ಲಬ್ ನ ಸಮಾಜ ಸೇವೆ ಅಪೂರ್ವವಾದದ್ದು: ರೋ.ದೇವಾನಂದ್

ಉಡುಪಿ: ಪರರಿಗೆ ಒಳಿತನ್ನು ಬಯಸುವುದೇ ಧರ್ಮ. ರೋಟರಿಯ ಮೂಲ ಧ್ಯೇಯವೇ ಇದಾಗಿದ್ದು, ಮಣಿಪಾಲ ಟೌನ್ ರೋಟರಿ ಕ್ಲಬ್, ಸ್ಕಿನ್ ಬ್ಯಾಂಕ್, ಮಕ್ಕಳ ಕ್ಯಾನ್ಸರ್ ನಿಧಿ ಇತ್ಯಾದಿ ಹಲವಾರು ಯೋಜನೆಗಳಿಂದ ಗುರುತಿಸಲ್ಪಡುತ್ತಿದೆ ಎಂದು ನಿಯೋಜಿತ ಜಿಲ್ಲಾ ಗವರ್ನರ್ ದೇವ್ ಆನಂದ್ ಹೇಳಿದರು. ಮಣಿಪಾಲ ಟೌನ್‌ ರೋಟರಿ ಕ್ಲಬ್ ನ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಸೇವೆ ಮತ್ತು ವ್ಯಕ್ತಿತ್ವ ವಿಕಸನವನ್ನು ಕೊಡುವ ರೋಟರಿ ಸಂಸ್ಥೆ ಅಂತಾರಾಷ್ಟ್ರೀಯವಾಗಿ ಮನುಕುಲದ ಸಹಬಾಳ್ವೆ, ಪರಿಸರ ರಕ್ಷಣೆ, ಶಾಂತಿ ಮತ್ತು ಅಭಿವೃದ್ಧಿಯನ್ನು ನಡೆಸುತ್ತಿರುವ […]