ಮಿಸ್ ಇಂಗ್ಲೆಂಡ್ ಸೌಂದರ್ಯ ಸ್ಪರ್ಧೆಯಲ್ಲಿ ಮೇಕ್ಅಪ್ ಇಲ್ಲದೆ ಫೈನಲ್ ಪ್ರವೇಶಿಸಿದ ಮೆಲಿಸಾ ರೌಫ್

ಲಂಡನ್: ಲಂಡನ್‌ನ ಮೆಲಿಸಾ ರೌಫ್ ಎಂಬ 20 ವರ್ಷದ ಯುವತಿ ಇತಿಹಾಸ ಸೃಷ್ಟಿಸಿದ್ದಾಳೆ. ರೌಫ್ ಮಿಸ್ ಇಂಗ್ಲೆಂಡ್ ಸ್ಪರ್ಧೆಯಲ್ಲಿ ಮೇಕ್ಅಪ್ ಇಲ್ಲದೆ ರ‍್ಯಾಂಪ್ ವಾಕ್ ಮಾಡಿದ ಮೊದಲ ಸ್ಪರ್ಧಿಯಾಗಿದ್ದಾರೆ. ಅವರೀಗ ಅಕ್ಟೋಬರ್ 17 ರಂದು ಫೈನಲ್‌ನಲ್ಲಿ 40 ಇತರ ಸ್ಪರ್ಧಿಗಳೊಂದಿಗೆ ಸ್ಪರ್ಧಿಸಲಿದ್ದಾರೆ. ಒಬ್ಬರು ತಮ್ಮ ಸ್ವಂತ ಚರ್ಮದಲ್ಲಿ (ತಾವು ಇರುವ ರೀತಿಯಲ್ಲಿ)ಸಂತೋಷವಾಗಿದ್ದಲ್ಲಿ ನಮ್ಮ ಮುಖವನ್ನು ಮೇಕ್ಅಪ್‌ನಿಂದ ಮುಚ್ಚಿಕೊಳ್ಳಬಾರದು ಎಂದೆನ್ನುತ್ತಾರೆ ಮೆಲಿಸಾ. ರಾಜ್ಯಶಾಸ್ತ್ರದ ವಿದ್ಯಾರ್ಥಿನಿಯಾಗಿರುವ ಮೆಲಿಸಾ, ಇತರ ಮಹಿಳೆಯರು ಮತ್ತು ಯುವತಿಯರು ತಮ್ಮ ನೈಸರ್ಗಿಕ ಸೌಂದರ್ಯವನ್ನು ಅನಾವರಣಗೊಳಿಸುವಂತೆ ಅವರನ್ನು […]