ಆಪರೇಶನ್ ಕಾವೇರಿ: ರಾತ್ರಿ ದೃಷ್ಟಿ ಕನ್ನಡಕಗಳನ್ನು ಬಳಸಿ ಭಾರತೀಯರನ್ನು ಸುಡಾನ್ ನಿಂದ ಪಾರು ಮಾಡಿದ ಭಾರತೀಯ ವಾಯುಸೇನೆ
ನವದೆಹಲಿ: ಸುಡಾನ್‌ನ ಸೇನೆ ಮತ್ತು ಅರೆಸೇನಾಪಡೆಯು ಅಧಿಕಾರಕ್ಕಾಗಿ ಹಿಂಸಾಚಾರದಲ್ಲಿ ತೊಡಗಿದ್ದು, ಇದು 400 ಕ್ಕೂ ಹೆಚ್ಚು ಜೀವಗಳನ್ನು ಬಲಿತೆಗೆದುಕೊಂಡಿದೆ. ಹಿಂಸಾಚಾರ ಸಂತ್ರಸ್ತ ಸುಡಾನ್ ನಲ್ಲಿ ಕರ್ನಾಟಕವೂ ಸೇರಿದಂತೆ ಭಾರತದ ಹಲವಾರು ರಾಜ್ಯಗಳ ನಾಗರಿಕರು ಸಿಲುಕಿದ್ದು, ಸುಡಾನ್‌ನಲ್ಲಿ ಸಿಲುಕಿರುವ ತನ್ನ ನಾಗರಿಕರನ್ನು ರಕ್ಷಿಸಲು ಭಾರತವು “ಆಪರೇಷನ್ ಕಾವೇರಿ” ಅನ್ನು ಪ್ರಾರಂಭಿಸಿತು. ಶುಕ್ರವಾರ, ಸುಡಾನ್ ನಲ್ಲಿ ಸಿಕ್ಕಿಬಿದ್ದ 135 ಭಾರತೀಯರನ್ನು ಹೊತ್ತ ಸಿ-130ಜೆ ವಿಮಾನದ ಎರಡನೇ ಬ್ಯಾಚ್ ಬಿಕ್ಕಟ್ಟಿನ ರಾಷ್ಟ್ರದಿಂದ ನಿರ್ಗಮಿಸಿದೆ. #OperationKaveri#ModiHainToMumkinHain Salute to our brave officers […]
ಭಾರತದಿಂದ ಅಫ್ಘಾನಿಸ್ತಾನಕ್ಕೆ 3000 ಮೆಟ್ರಿಕ್ ಟನ್ ಗೋಧಿ ರವಾನೆ
ನವದೆಹಲಿ: ಶನಿವಾರದಂದು ಭಾರತವು 3,000 ಮೆಟ್ರಿಕ್ ಟನ್ ಗೋಧಿಯನ್ನು ಮತ್ತೊಮ್ಮೆ ಅಫ್ಘಾನಿಸ್ತಾನಕ್ಕೆ ಕಳುಹಿಸಿಕೊಟ್ಟಿದೆ. ಅಫ್ಘಾನ್ ಜನರಿಗೆ ಮಾನವೀಯ ನೆರವು ನೀಡುವ ಭಾರತದ ಬದ್ಧತೆ ಅಚಲವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ. ಇಲ್ಲಿಯವರೆಗೆ, ಭಾರತವು ವಿಶ್ವ ಆಹಾರ ಕಾರ್ಯಕ್ರಮದ ಸಹಭಾಗಿತ್ವದಲ್ಲಿ ಅಫ್ಘಾನಿಸ್ತಾನಕ್ಕೆ 33,500 ಮೆಟ್ರಿಕ್ ಟನ್ ಗೋಧಿ ಸಾಗಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಭೂಕಂಪ ಹಿನ್ನೆಲೆ: ಅಫ್ಘಾನಿಸ್ತಾನದ ನಾಗರಿಕರಿಗೆ ಎರಡು ವಿಮಾನಗಳಲ್ಲಿ 27 ಟನ್ ತುರ್ತು ಪರಿಹಾರ ರವಾನಿಸಿದ ಭಾರತ
ನವದೆಹಲಿ: ಸುಮಾರು 1000 ಕ್ಕೂ ಹೆಚ್ಚು ನಾಗರಿಕರ ಪ್ರಾಣ ಕಿತ್ತುಕೊಂಡ ಭೀಕರ ಭೂಕಂಪದ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನದ ಜನರಿಗೆ ಎರಡು ವಿಮಾನಗಳಲ್ಲಿ 27 ಟನ್ ತುರ್ತು ಪರಿಹಾರ ನೆರವನ್ನು ಭಾರತವು ರವಾನಿಸಿದೆ. ಪರಿಹಾರ ನೆರವು ಕುಟುಂಬ ರಿಡ್ಜ್ ಟೆಂಟ್‌ಗಳು, ಮಲಗುವ ಚೀಲಗಳು, ಹೊದಿಕೆಗಳು ಮತ್ತು ಮಲಗುವ ಮ್ಯಾಟ್‌ಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ಒಳಗೊಂಡಿದೆ. ಪರಿಹಾರ ಸರಕನ್ನು ಕಾಬೂಲ್‌ನಲ್ಲಿರುವ ಮಾನವೀಯ ವ್ಯವಹಾರಗಳ ಸಮನ್ವಯಕ್ಕಾಗಿ ವಿಶ್ವಸಂಸ್ಥೆಯ ಕಚೇರಿ ಮತ್ತು ಅಫ್ಘಾನ್ ರೆಡ್ ಕ್ರೆಸೆಂಟ್ ಸೊಸೈಟಿಗೆ ಹಸ್ತಾಂತರಿಸಲಾಗುವುದು. ವಿದೇಶಾಂಗ ವ್ಯವಹಾರಗಳ ಸಚಿವಾಲಯವು, ಭಾರತವು […]