ಆಯುಷ್ ಟಿ.ವಿಯಲ್ಲಿ ಯೋಗ ಬೋಧಕರಾಗಲು ಅವಕಾಶ
ಉಡುಪಿ: ಆಯುಷ್ ಟಿ.ವಿಯು ಕಳೆದ 7 ವರ್ಷಗಳಿಂದ ನಾಡಿನ ಜನರ ಆರೋಗ್ಯ ಮತ್ತು ಭಾರತೀಯ ಪ್ರಾಚೀನ ವೈದ್ಯಕೀಯ ಪರಂಪರೆಯನ್ನು ವಿಶ್ವಕ್ಕೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದರೊಂದಿಗೆ ಯೋಗದಿಂದ ಆರೋಗ್ಯವಾಗಿರಲು ಈಗಾಗಲೇ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ, ಜನರಿಗೆ ತಲುಪಿಸಿದೆ. ಯೋಗವನ್ನು ದೈನಂದಿನ ಜೀವನದ ಒಂದು ಭಾಗವಾಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಅಂಗವಾಗಿ ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆ (ಎಂ.ಡಿ.ಎನ್.ವೈ) ಯ ಯೋಗ ಸರ್ಟಿಫಿಕೇಷನ್ ಬೋರ್ಡ್ ಸಿಬ್ಬಂದಿ ಪ್ರಮಾಣೀಕರಣ ಮಾನ್ಯತೆಯನ್ನು ಆಯುಷ್ ಟಿ.ವಿ ಪಡೆದಿದೆ. ಆಯುಷ್ ಟಿ.ವಿ.ಯು ರಾಜ್ಯದಾದ್ಯಂತ […]