ಇಂದ್ರಾಳಿ: ಎಂಸಿಸಿ ಲೆಕ್ಕಾಧಿಕಾರಿಯ ಕಾರು ಚಾಲಕನ ಮೃತದೇಹ ರೈಲ್ವೆ ಹಳಿಯಲ್ಲಿ ಪತ್ತೆ
ಇಂದ್ರಾಳಿ: ಮಂಗಳೂರು ಮಹಾನಗರ ಪಾಲಿಕೆಯ (ಎಂಸಿಸಿ) ಮುಖ್ಯ ಲೆಕ್ಕಾಧಿಕಾರಿಯ ಕಾರು ಚಾಲಕನ ಮೃತದೇಹ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದೆ. ಇಂದ್ರಾಳಿಯಲ್ಲಿ ವೇಗವಾಗಿ ಬರುತ್ತಿದ್ದ ರೈಲಿನೆದುರು ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಜನವರಿ 25ರ ಬುಧವಾರ ಬೆಳಗ್ಗಿನ ಜಾವ ಈ ಘಟನೆ ನಡೆದಿದ್ದು, ಮೃತರನ್ನು ಹೆಬ್ರಿಯ ರಾಘವೇಂದ್ರ ಹೆಗಡೆ ಎಂದು ಗುರುತಿಸಲಾಗಿದೆ. ಘಟನೆ ನಡೆದ ಸ್ಥಳದ ಬಳಿ ಕಾರು ಪತ್ತೆಯಾಗಿದ್ದು, ಕಾರಿನ ಮೇಲೆ ‘ಮಂಗಳೂರು ಮಹಾನಗರ ಪಾಲಿಕೆ – ಮುಖ್ಯ ಲೆಕ್ಕಾಧಿಕಾರಿ’ ಎಂದು ಅಧಿಕೃತ ಬೋರ್ಡ್ ಇದೆ. ಮೂಲಗಳ ಪ್ರಕಾರ, […]
ಎರಡನೇ ಸುತ್ತಿನ ನೀಟ್ ಯುಜಿ ಕೌನ್ಸೆಲಿಂಗ್ ಫಲಿತಾಂಶ ಪ್ರಕಟ
ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ವು ಎರಡನೇ ಸುತ್ತಿನ ನೀಟ್ ಯುಜಿ ಕೌನ್ಸೆಲಿಂಗ್ 2022 ರ ಸೀಟು ಹಂಚಿಕೆ ಫಲಿತಾಂಶವನ್ನು ಪ್ರಕಟಿಸಿದೆ. ಅಭ್ಯರ್ಥಿಗಳು ಇದನ್ನು kea.kar.nic.in ಅಥವಾ cetonline.karnataka.gov.in/kea ನಲ್ಲಿ ಪರಿಶೀಲಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳು ಶುಲ್ಕವನ್ನು ಈಗಾಗಲೇ ಪಾವತಿಸದಿದ್ದರೆ, ನವೆಂಬರ್ 28 ರಂದು ಮಧ್ಯಾಹ್ನ 1 ರಿಂದ ನವೆಂಬರ್ 30, 2022 ರವರೆಗೆ ಪಾವತಿಸಬಹುದು. ನವೆಂಬರ್ 28 (ಮಧ್ಯಾಹ್ನ 3) ರಿಂದ ಡಿಸೆಂಬರ್ 2 (ರಾತ್ರಿ 11:59) ವರೆಗೆ ಪ್ರವೇಶ ಆದೇಶವನ್ನು ಡೌನ್‌ಲೋಡ್ ಮಾಡಬಹುದು. ಕೆಇಎ ಬಿಡುಗಡೆ […]
ಪೋಸ್ಟರ್ ಹಿಡಿದು ಏಕಾಂಗಿ ಹೋರಾಟ ನಡೆಸುತ್ತಿರುವ ಮಂಗಳೂರಿನ ಬಾಲಕ: ಗೆಳೆಯನ ಸಾವಿಗೆ ನ್ಯಾಯ ಕೇಳುತ್ತಿರುವ ಬಾಲಕನ ಕೂಗು ಆಡಳಿತಕ್ಕೆ ಕೇಳುವುದೆ?
ಮಂಗಳೂರು: ರಸ್ತೆಯಲ್ಲಿ ಗುಂಡಿಗೆ ಬಲಿಯಾದ ಇಂಜಿನಿಯರಿಂಗ್ ವಿದ್ಯಾರ್ಥಿ ಅತೀಶ್‌ನನ್ನು ಕಳೆದುಕೊಂಡ ಆತನ ಸ್ನೇಹಿತ ಲಿಖಿತ್ ಮಂಗಳೂರು ಮಹಾನಗರ ಪಾಲಿಕೆಯ ಮುಂದುಗಡೆ ನಿಂತು ಪೋಸ್ಟರ್ ಹಿಡಿದು ಒಬ್ಬಂಟಿಯಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ರಸ್ತೆ ಬದಿಯಲ್ಲಿ ಒಂಟಿಯಾಗಿ ಪೋಸ್ಟರ್ ಹಿಡಿದು ರಸ್ತೆಯಲ್ಲಿ ‘ಸುರಕ್ಷಾ ಬಂಧನ’ಕ್ಕೆ ಆಗ್ರಹಿಸುತ್ತಿದ್ದಾರೆ. ತನ್ನ ಗೆಳೆಯನ ಸಾವಿಗೆ ನ್ಯಾಯ ಕೇಳುತ್ತಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆ ಎದುರು ಪೋಸ್ಟರ್ ಹಿಡಿದು ನ್ಯಾಯ ಕೇಳುತ್ತಿರುವ ಈ ಬಾಲಕನ ಹೆಸರು ಲಿಖಿತ್ ರೈ. ಇತ್ತೀಚೆಗೆ ಆತನ ಸ್ನೇಹಿತ ಅತೀಶ್ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. […]